ಭಾಗಮಂಡಲ, ಫೆ. 22: ಬ್ರೇಕ್ ವಿಫಲಗೊಂಡ ಜೀಪೊಂದು ರಸ್ತೆ ಬದಿಯ ಬರೆಗೆ ಅಪ್ಪಳಿಸಿದ ಸಂದರ್ಭ ಜೀಪು ಬರೆಯ ನಡುವೆ ಸಿಲುಕಿದ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಭಾಗಮಂಡಲ ನಿವಾಸಿ, ಮೊಟ್ಟನ ಯಧುಕುಮಾರ್ ಅವರು ತಮ್ಮ ಪತ್ನಿ ಗೀತಾ (53) ಅವರೊಂದಿಗೆ ತಮ್ಮ ಜೀಪಿನಲ್ಲಿ (ಸಿಟಿಎಕ್ಸ್ 7458) ತೆರಳುತ್ತಿದ್ದ ಸಂದರ್ಭ ಚೇರಂಗಾಲ ತಲಕಾವೇರಿ ರಸ್ತೆಯ ಇಳಿಜಾರಿನಲ್ಲಿ ಜೀಪಿನ ಬ್ರೇಕ್ ವಿಫಲಗೊಂಡಿದೆ. ಜೀಪನ್ನು ನಿಯಂತ್ರಿಸುವ ಸಲುವಾಗಿ ಯಧುಕುಮಾರ್ ರಸ್ತೆಯ ಎಡಬದಿಗೆ ಚಾಲಿಸಿದ್ದಾನೆ. ಜೀಪು ಬರೆಗೆ ಅಪ್ಪಳಿಸುವ ಸಂದರ್ಭದಲ್ಲಿ ಜೀಪಿನಿಂದ ಹೊರಗೆ ಎಸೆಯಲ್ಪಟ್ಟ ಗೀತಾ ಜೀಪು ಹಾಗೂ ಬರೆಯ ನಡುವೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.