ಮಡಿಕೇರಿ, ಫೆ. 23: ಕೊಡವ ನ್ಯಾಷನಲ್ ಕೌನ್ಸಿಲ್‍ನ ಪ್ರಯತ್ನದ ಫಲವಾಗಿ ಸರ್ಕಾರದ ಸ್ಪಂದನೆಯೊಂದಿಗೆ ಹಾಗೂ ರಾಜ್ಯ ಸರ್ಕಾರದಿಂದ ಕೊಡವ ಜನಾಂಗದ ಕುಲಶಾಸ್ತ್ರ ಅಧ್ಯಯನ ಕಾರ್ಯವನ್ನು ನಡೆಸುತ್ತಿದ್ದು, ಈ ಸಮೀಕ್ಷಾ ಕಾರ್ಯ ಕೊನೆಯ ಹಂತ ತಲಪಿದೆ.
ಇದೀಗ ಕೊಡವ ಕುಲಶಾಸ್ತ್ರ ಅಧ್ಯಯನದ ಕೊನೆಯ ಹಂತದ ಕಾರ್ಯಕ್ರಮದ ಅಂಗವಾಗಿ ತಾ. 25 ರಂದು ಮಡಿಕೇರಿ ಕೊಡವ ಸಮಾಜದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಮೀಕ್ಷಾ ಅಧ್ಯಯನ ನಡೆಸುತ್ತಿದ್ದು, ನಗರ ವ್ಯಾಪ್ತಿಯ ಹಾಗೂ ಸುತ್ತುಮುತ್ತಲಿನ ಜನಾಂಗ ಬಾಂಧವರು ತಮ್ಮ ವಿವರವನ್ನು ಒದಗಿಸಿ ಸರ್ಕಾರದಿಂದ ಪಡೆದುಕೊಳ್ಳಬಹುದಾದ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಪ್ರಕಟಣೆ ತಿಳಿಸಿದೆ.