ಕೂಡಿಗೆ, ಫೆ. 23: ಹಾರಂಗಿಯಲ್ಲಿರುವ ಮೀನು ಮರಿ ಉತ್ಪಾದನಾ ಕೇಂದ್ರ, ಮೀನುಗಾರಿಕೆ ಇಲಾಖೆಯ ವತಿಯಿಂದ ಹಾರಂಗಿಯಲ್ಲಿ ಸಾಕಲಾದ ಮಹಶೀರ್ ಮೀನು ಮರಿಗಳನ್ನು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಹರಿಯುವ ಕಾವೇರಿ ನದಿಗೆ ಪ್ರತಿವರ್ಷದಂತೆ ಬಿಡಲಾಯಿತು.

ಈ ಸಾಲಿನಲ್ಲಿ 10000 ಮಹಶೀರ್ ಮೀನು ಮರಿಗಳನ್ನು ಕಾವೇರಿ ನದಿಗೆ ಬಿಡಲಾಯಿತು. ಮಹಶೀರ್ ಮೀನು ಮರಿಗಳನ್ನು ಕಾವೇರಿ ನದಿಗೆ ಬಿಡುವ ಕಾರ್ಯಕ್ರಮಕ್ಕೆ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ಚಾಲನೆ ನೀಡಿದರು.

ಈ ಸಂದರ್ಭ ಕಣಿವೆಯ ಸಾಹಿತಿ ಭಾರಧ್ವಾಜ್, ದೇವಾಲಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಮಾಧವ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಮಧುಕುಮಾರ್, ಹಾರಂಗಿ ಮೀನುಗಾರಿಕಾ ಇಲಾಖೆಯ ಮೀನು ಉತ್ಪಾದನಾ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್, ಸೋಮವಾರಪೇಟೆ ತಾಲೂಕು ಮೀನುಗಾರಿಕಾ ಇಲಾಖೆಯ ಮಿಲನಾ ಭರತ್, ಕಣಿವೆ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಕರುಂಬಯ್ಯ, ಗಣೇಶ್ ಸೇರಿದಂತೆ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಇದ್ದರು.