ಶ್ರೀಮಂಗಲ, ಫೆ. 23: ಶ್ರೀಮಂಗಲ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲಾ ವಿಭಾಗದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆಯನ್ನು ಮದ್ರೀರ ಪಿ. ವಿಷ್ಣು ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಮಚ್ಚಾಮಾಡ ಪಿ. ಸುಬ್ರಮಣಿ, ಕಾರ್ಯದರ್ಶಿ ಕಟ್ಟೇರ ಪಿ. ಸುಶೀಲ, ನಿರ್ದೇಶಕರುಗಳಾದ ಮಂದಮಾಡ ಗಣೇಶ್, ಅಜ್ಜಮಾಡ ಯು. ಬೋಪಣ್ಣ, ಕೆ.ಎನ್. ಸಂದೀಪ್, ರಜಿತ್ ಪೂವಣ್ಣ, ಕಾಲೇಜಿನ ಪ್ರಾಂಶುಪಾಲರು, ಪ್ರೌಢಶಾಲೆಯ ಮಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.