ಸೋಮವಾರಪೇಟೆ,ಫೆ.22: ಸಮೀಪದ ಮಸಗೋಡು ಚನ್ನಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾ. 23ರಂದು (ಇಂದು) ಸಂಜೆ 4.30ಕ್ಕೆ ಶಾಲಾ ಆವರಣದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅರಕಲಗೂಡು ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ವಿರಕ್ತ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ನಿವೃತ್ತ ವಿಜ್ಞಾನಿ ಡಾ. ಸಿ.ಎಂ. ಸೌಭಾಗ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಅಬಾಕಸ್ ಶಿಕ್ಷಕಿ ಸುಕನ್ಯ, ಕರಾಟೆ ತರಬೇತುದಾರ ಅರುಣ್‍ಕುಮಾರ್, ಕಾಫಿ ಬೆಳೆಗಾರ ವಿಜೇತ್, ನೃತ್ಯ ಕಲಾ ತಂಡದ ಚೇತನ್ ಅವರುಗಳನ್ನು ಸನ್ಮಾನಿಸಲಾಗುವದು ಎಂದು ಪ್ರಬಾರ ಮುಖ್ಯೋಪಾಧ್ಯಾಯ ಸಂತೋಷ್‍ಕುಮಾರ್ ತಿಳಿಸಿದ್ದಾರೆ.