ಕುಶಾಲನಗರ, ಫೆ. 21: ಟಿಬೆಟಿಯನ್ನರ ನೂತನ ವರ್ಷದ ಅಂಗವಾಗಿ ಬೈಲುಕೊಪ್ಪೆಯಲ್ಲಿ ಬುದ್ದ ಅಮಿತಾಯುಷ್ ಅವರ ಬೃಹತ್ ಚಿತ್ರಪಟ ಅನಾವರಣಗೊಳಿಸಲಾಯಿತು. ಈ ಮೂಲಕ ಟಿಬೆಟಿಯನ್ ನೂತನ ವರ್ಷಾಚರಣೆÉ ತೆರೆ ಕಂಡಿದೆ.

ವಿಶ್ವದಲ್ಲಿಯೇ ಅತಿ ದೊಡ್ಡ ಚಿತ್ರಪಟವೆಂದು ಪರಿಗಣಿಸಲಾಗಿರುವ ಅಮಿತಾಯುಷ್ ಪಟವನ್ನು 7 ಅಂತಸ್ತುಗಳ ಕಟ್ಟಡದಲ್ಲಿ ನಿರ್ಮಿಸಿರುವ ಬೃಹತ್ ಕಬ್ಬಿಣದ ಗೋಪುರದಲ್ಲಿ ಬೆಳಗ್ಗಿನ ಜಾವ ಅನಾವರಣಗೊಳಿಸಲಾಯಿತು.

30 ನಿಮಿಷಗಳ ಕಾಲ ಪಟಕ್ಕೆ ಸಾಂಪ್ರದಾಯಿಕ ಪೂಜೆಯೊಂದಿಗೆ ನಮನ ಸಲ್ಲಿಸಲಾಯಿತು. ನೂತನ ವರ್ಷಾಚರಣೆ ಸಂದರ್ಭ ಎರಡು ಚಿತ್ರಪಟಗಳನ್ನು ಅನಾವರಣಗೊಳಿಸುವ ಪದ್ಧತಿಯನ್ನು ಟಿಬೆಟಿಯನ್ನರು ಪಾಲಿಸಿಕೊಂಡು ಬಂದಿದ್ದು, ನೂತನ ವರ್ಷದ ಹತ್ತನೇ ದಿನದಂದು ಪದ್ಮಸಾಂಭವ ಗುರುಗಳ ಚಿತ್ರಪಟ ಅನಾವರಣಗೊಳಿಸಿದ್ದರು.