ಗೋಣಿಕೊಪ್ಪ ವರದಿ, ಫೆ. 21: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಯುವ ಒಕ್ಕೂಟ ಹಾಗೂ ಶ್ರೀ ಆದಿಶಕ್ತಿ ಯುವತಿ ಮಂಡಳಿ ಸಂಯುಕ್ತ ಆಶ್ರಯದಲ್ಲಿ ತಾ. 24 ರಂದು ಕಿರುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಗ್ರಾಮೀಣ ಕ್ರೀಡೆ ಆಯೋಜಿಸಲಾಗಿದೆ.

ಪುರುಷರಿಗೆ ಕಬಡ್ಡಿ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಪಂದ್ಯಾಟ ನಡೆಯಲಿದೆ ಎಂದು ಶ್ರೀ ಆದಿಶಕ್ತಿ ಯುವತಿ ಮಂಡಳಿಯ ಪ್ರಕಟಣೆ ತಿಳಿಸಿದೆ.