ಗೋಣಿಕೊಪ್ಪ ವರದಿ, ಫೆ. 21: ಇಲ್ಲಿನ ಕಾವೇರಿ ಕಾಲೇಜು ಎನ್‍ಎಸ್‍ಎಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ತಾ. 22 ರಂದು (ಇಂದು) ರಕ್ತದಾನ ಮತ್ತು ಏಡ್ಸ್ ಜಾಗೃತಿ ಶಿಬಿರ ಆಯೋಜಿಸಲಾಗಿದೆ. 18 ವರ್ಷ ಮೇಲ್ಪಟ್ಟ ಯುವ ಜನರು ಸ್ವಯಂ ಪ್ರೇರಿತ ರಕ್ತದಾನ ಮಾಡಬಹುದು.
ರಕ್ತದಾನ ಮಾಡುವವರು ಬೆಳಗ್ಗಿನ ಉಪಹಾರ ಸೇವಿಸಿ ಪಾಲ್ಗೊಳ್ಳಬಹುದಾಗಿದೆ. ಬೆಳಿಗ್ಗೆ 10 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9880504208 ಸಂಪರ್ಕಿಸ ಬಹುದಾಗಿದೆ.