ಮಡಿಕೇರಿ: ನಗರದ ಹೊಸ ಬಡಾವಣೆಯ ಯೂರೋ ಕಿಡ್ಸ್ ಮತ್ತು ಮಡಿಕೇರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಭಾಗವಹಿಸಿದ್ದರು.

ರವಿತೇಜ ಎಜ್ಯುಕೇಷನ್ ಟ್ರಸ್ಟ್‍ನ ಅಧ್ಯಕ್ಷ ಕೆ.ಎಂ. ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕರೆಸ್ಪಾಂಡೆಂಟ್ ಚಂದನ್ ಭಾಗವಹಿಸಿದ್ದರು. ಶಾಲಾ ಕ್ರೀಡಾಕೂಟದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಹತಾಪತ್ರ ಹಾಗೂ ಪದಕಗಳನ್ನು ನೀಡಲಾಯಿತು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿದ್ಧಿ ಮತ್ತು ಯರವರ ಯಥಾವತ್ತಾದ ಅನುಕರಣೆಯ ನೃತ್ಯ ಎಲ್ಲರ ಮನಸೆಳೆಯುವಂತಿತ್ತು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಮಠದ ಶಿವಕುಮಾರ ಸ್ವಾಮೀಜಿ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳ ಮಕ್ಕಳ ಸಂತೆ ನಡೆಯಿತು.

ವಿದ್ಯಾಸಂಸ್ಥೆಯ ಅಧ್ಯಕ್ಷ ಕಲ್ಲುಮಠದ ಮಹಾಂತಸ್ವಾಮೀಜಿ ಮಕ್ಕಳ ಸಂತೆಯಲ್ಲಿ ಹಣ್ಣು-ಹಂಪಲು ಖರೀದಿಸುವ ಮೂಲಕ ಸಂತೆಗೆ ಚಾಲನೆ ನೀಡಿದರು. ಮಕ್ಕಳು ವಿವಿಧ ತರಕಾರಿ, ಹಣ್ಣು-ಹಂಪಲು, ತಿಂಡಿ-ತಿನಿಸು, ಗುಡಿ ಕೈಗಾರಿಕೆ ವಸ್ತುಗಳನ್ನು ತಂದು ಉತ್ಸಾಹದಿಂದ ಮಾರಾಟ ಮಾಡಿದರು. ಪೋಷಕರು, ಸಾರ್ವಜನಿಕರು, ಶಿಕ್ಷಕರು ಬೇಕಾದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು.

ಮಕ್ಕಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸಿ, ವ್ಯವಹಾರ ಜ್ಞಾನದ ಅರಿವು ಮೂಡಿಸಲು ಮಕ್ಕಳ ಸಂತೆಯನ್ನು ಆಯೋಜಿಸಲಾಗಿದೆ ಎಂದು ಸ್ವಾಮೀಜಿ ಅಭಿಪ್ರಾಯ¥ಟ್ಟರು. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಜರಿದ್ದರು.ನಾಪೋಕ್ಲು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉಪನ್ಯಾಸಕರಾದ ಕವನ ಹಾಗೂ ರೇಷ್ಮ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು. ಕಾಲೇಜಿನ ಸುತ್ತಮುತ್ತಲ ಮನೆಗಳಿಗೆ ತೆರಳಿ ಜನರಲ್ಲಿ ಮತದಾನದ ಅರಿವನ್ನು ಮೂಡಿಸಲಾಯಿತು.

ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಗೋಣಿಕೊಪ್ಪ ವರದಿ: ಬೆಂಗಳೂರು ವೈಟ್ ಶಟಲ್ಸ್ ಬ್ಯಾಡ್‍ಮಿಂಟನ್ ಸಂಸ್ಥೆ ವತಿಯಿಂದ ಅಲ್ಲಿನ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಬ್ಯಾಡ್‍ಮಿಂಟನ್ ಕ್ರೀಡಾಕೂಟ ಹಾಗೂ ಐಬಾಲ್ ರಾಜ್ಯ ಬ್ಯಾಡ್‍ಮಿಂಟನ್ ಸಂಸ್ಥೆ ಆಯೋಜಿಸಿದ್ದ ಮುಕ್ತ ಬ್ಯಾಡ್‍ಮಿಂಟನ್ ಬಾಲಕ-ಬಾಲಕಿಯರ ಸಿಂಗಲ್ಸ್ ಟೂರ್ನಿಯಲ್ಲಿ ಕೂರ್ಗ್ ಬ್ಯಾಡ್‍ಮಿಂಟನ್ ಅಸೋಸಿಯೇಷನ್ ಮಡಿಲಿಗೆ ಹಲವು ಬಹುಮಾನ ಲಭಿಸಿವೆ.

ಕೂರ್ಗ್ ಬ್ಯಾಡ್‍ಮಿಂಟನ್ ಅಸೋಸಿಯೇಷನ್ ವತಿಯಿಂದ 7 ಸ್ಪರ್ಧಿಗಳು ಪಾಲ್ಗೊಂಡಿದ್ದು, ಗೋಣಿಕೊಪ್ಪ ಕಾಪ್ಸ್ ಶಾಲೆಯ ದಿಯಾ ಭೀಮಯ್ಯ, ಮಡಿಕೇರಿ ಕೊಡಗು ವಿದ್ಯಾಲಯ ಶಾಲೆಯಿಂದ ಆರಾಧನಾ ಬಾಲಚಂದ್ರ, ಕಶ್ಯಪ್ ನಂಜಪ್ಪ, ಶಮಂತ್ ಸುಬ್ಬಯ್ಯ, ಮಡಿಕೇರಿ ಸೆಂಟ್ ಜೋಸೆಫ್ ಶಾಲೆಯ ಅನನ್ಯ ಲೋಬೊ ಸ್ಪರ್ಧಿಸಿದ್ದಾರೆ. 17 ವರ್ಷ ವಯೋಮಿತಿಯ ವಿಭಾಗದಲ್ಲಿ ಆರಾಧನಾ ಬಾಲಚಂದ್ರ ಅವರಿಗೆ ಪ್ರಥಮ, 14 ವಯೋಮಿತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ದೊರೆಯಿತು. 14 ವಯೋಮಿತಿ ವಿಭಾಗದಲ್ಲಿ ದಿಯಾ ಭೀಮಯ್ಯಗೆ 3 ನೇ ಸ್ಥಾನ, 14 ವಯೋಮಿತಿಯ ಬಾಲಕರಲ್ಲಿ ಕಶ್ಯಪ್ ನಂಜಪ್ಪ ಪ್ರಥಮ, 13 ವಯೋಮಿತಿಯಲ್ಲಿ ಶಮಂತ್ ಸುಬ್ಬಯ್ಯ ತೃತೀಯ ಸ್ಥಾನ ದೊರಕಿದೆ.

ಬ್ಯಾಡ್‍ಮಿಂಟನ್ ಮುಕ್ತ ವಿಭಾಗ

ಆರಾಧನಾ ಬಾಲಚಂದ್ರ ಅವರಿಗೆ 13, 15 ಹಾಗೂ 17 ವಯೋಮಿತಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ದೊರೆಯಿತು. 13 ಹಾಗೂ 17 ವಯೋಮಿತಿಯಲ್ಲಿ ಅನನ್ಯ ಲೋಬೋ ಅವರಿಗೆ ದ್ವಿತೀಯ ಸ್ಥಾನ, 13 ವಯೋಮಿತಿಯಲ್ಲಿ ದಿಯಾ ಭೀಮಯ್ಯ ಅವರಿಗೆ 3 ನೇ ಸ್ಥಾನ, 13 ವಯೋಮಿತಿಯ ಬಾಲಕರಲ್ಲಿ ಕಶ್ಯಪ್ ನಂಜಪ್ಪಗೆ ಪ್ರಥಮ, 15 ವಯೋಮಿತಿಯ ಬಾಲಕರಲ್ಲಿ ಶಮಂತ್ ಸುಬ್ಬಯ್ಯ ಅವರಿಗೆ ಪ್ರಥಮ, 17 ವಯೋಮಿತಿಯಲ್ಲಿ 3 ನೇ ಸ್ಥಾನ ದೊರೆಯಿತು.