ಮಡಿಕೇರಿ, ಫೆ. 20: ಲೋಕಸಭಾ ಸಾರ್ವತ್ರಿಕ ಚುನಾವಣಾ ಸಂದರ್ಭ ದಲ್ಲಿ ಸೆಕ್ಟರ್ ಅಧಿಕಾರಿಗಳ ಪಾತ್ರ ಮಹತ್ವವಾಗಿದ್ದು, ಅತ್ಯಂತ ಜಾಗರೂ ಕತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ಸೆಕ್ಟರ್ ಅಧಿಕಾರಿಗಳಿಗೆ ಎಎಂಎಫ್, ವಲ್ನರಬಲ್ ಪ್ರದೇಶ ಮತ್ತು ಇವಿಎಂ ಗಳ ಬಳಕೆ ಬಗ್ಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಸೆಕ್ಟರ್ ಅಧಿಕಾರಿ ಇವಿಎಂ ಮತಯಂತ್ರಗಳ ಬಳಕೆ ಕುರಿತು ಸಂಪೂರ್ಣ ಜ್ಞಾನ ಹೊಂದಿರ ಬೇಕು. ಇವಿಎಂಗಳ ಬಳಕೆಗೂ ಮುನ್ನ ಎವಿಎಂಗಳ ತಪಾಸಣೆ ಮಾಡಿ ನಂತರ ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಇವಿಎಂಗಳು ಅತ್ಯಂತ ಸುರಕ್ಷಿತವಾಗಿದ್ದು, ಇದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಪ್ರತಿಯೊಬ್ಬ ಸೆಕ್ಟರ್ ಅಧಿಕಾರಿ ಅಧೀನದಲ್ಲಿ ಬರುವ ಬಿಎಲ್‍ಒಗಳ ಕಾರ್ಯಗಳ ಮೇಲೆ ನಿಗಾವಹಿಸಬೇಕು ಎಂದು ಅವರು ತಿಳಿಸಿದರು.

ತಹಶೀಲ್ದಾರ್‍ಗಳು ಹಾಗೂ ಎಆರ್‍ಒಗಳು ಸೆಕ್ಟರ್ ಅಧಿಕಾರಿ ಗಳೊಂದಿಗೆ ಸಮನ್ವಯ ಸಾಧಿಸಿ ಚುನಾವಣಾ ಕಾರ್ಯದಲ್ಲಿ ಯಾವದೇ ಲೋಪದೋಷ ಆಗದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಇವಿಎಂ ಚುನಾವಣಾ ಮತ ಯಂತ್ರದ ಬಗ್ಗೆ ಜನರಿಗೆ ಜಾಗೃತಿಯನ್ನು ಮೂಡಿಸುವದು ಅಗತ್ಯ. ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆಗಳು ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕಾರ್ಯಪ್ರವೃತರಾಗಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್ ಮಾತನಾಡಿ, ಇವಿಎಂ ಬಳಕೆಗೆ ಚುನಾವಣಾ ಆಯೋಗ ನಿಗದಿಪಡಿಸಿದ ಮಾನದಂಡಗಳ ಅನ್ವಯ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಇವಿಎಂ ಮತ ಯಂತ್ರ ಬಳಕೆಯ ತರಬೇತಿ ಅಧಿಕಾರಿ ಹಾಗೂ ಡಯಟ್ ಪ್ರಾಂಶುಪಾಲ ವಾಲ್ಟರ್ ಡಿ ಮೆಲ್ಲೊ ಇವಿಎಂ ಮತ ಯಂತ್ರದ ಬಳಕೆಯ ವಿಧಾನ ಹಾಗೂ ನಿರ್ವಹಣೆ ಕುರಿತು ತರಬೇತಿ ನೀಡಿದರು. ಕಾರ್ಯಾ ಗಾರದಲ್ಲಿ ಉಪವಿಭಾಗಾಧಿಕಾರಿ ಟಿ. ಜವರೇಗೌಡ, ಇವಿಎಂ ತರಬೇತಿದಾರರು ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಷಂಶುದ್ದೀನ್ ಇದ್ದರು.