ಸೋಮವಾರಪೇಟೆ, ಫೆ. 20: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಅಂಗವಾಗಿ ಕೃಷಿ ಭೂಮಿಯ ಮಣ್ಣು ಪರೀಕ್ಷೆ ನಡೆಸಿ, ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡನ್ನು ವಿತರಿಸಲಾಯಿತು.
ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಇಫ್ಕೋ ಕಂಪೆನಿಯ ಸಹಯೋಗದೊಂದಿಗೆ ಕೃಷಿಕರ ಭೂಮಿಯ ಮಣ್ಣನ್ನು ಪರೀಕ್ಷೆಗೊಳಪಡಿಸಿ ಆರೋಗ್ಯ ಕಾರ್ಡನ್ನು ಸಂಘದ ನಿರ್ದೇಶಕ ಎಂ.ಎಸ್. ಲಕ್ಷ್ಮೀಕಾಂತ್ ವಿತರಿಸಿದರು.
ಇಫ್ಕೋ ಕಂಪೆನಿಯ ಮಣ್ಣು ತಜ್ಞ ಹೆಚ್. ಮಂಜುನಾಥ್, ಪ್ರಾ.ಕೃ.ಪ.ಸ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಮುಖ್ಯ ಲೆಕ್ಕಾಧಿಕಾರಿ ಅನಿಲ್‍ಕುಮಾರ್, ಶ್ರೀಧರ್ ಸಂಘದ ಸದಸ್ಯರುಗಳು ಹಾಜರಿದ್ದರು.