ನಾಪೆÇೀಕ್ಲು, ಫೆ. 19: ಸಮೀಪದ ವೆಸ್ಟ್ ಕೊಳಕೇರಿ ಶ್ರೀ ಭಗವತಿ ದೇವಳದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶದಲ್ಲಿ ಹೋಮ ಹವನಗಳನ್ನು ನಡೆಸಲಾಯಿತು.

ಪ್ರವಾಸಿ ಜಾನಪದ ಲೋಕೋತ್ಸವ : ಟಿ. ತಿಮ್ಮೇಗೌಡ ಮಾಹಿತಿ

ಗೋಣಿಕೊಪ್ಪಲು, ಫೆ. 19: ಆಧುನಿಕ ಜಗತ್ತಿನಲ್ಲಿ ನಮ್ಮ ಪೂರ್ವಜರ ಅಪೂರ್ವ ಜಾನಪದ ಕಲೆಗಳು ನಶಿಸಿಹೋಗಬಹುದಾದ ಸಾಧ್ಯತೆ ಹಿನ್ನೆಲೆ 1994 ರಲ್ಲಿ ಕರ್ನಾಟಕ ಜಾನಪದ ಪರಿಷತ್ ಅಸ್ತಿತ್ವಕ್ಕೆ ತರಲಾಯಿತು. ಇದೀಗ ಬೆಳ್ಳಿಹಬ್ಬದ ಸಂಭ್ರಮದ ವರ್ಷದಲ್ಲಿ ರಾಜ್ಯದ 25ಕ್ಕೂ ಅಧಿಕ ಜಿಲ್ಲೆಗಳ ಜನಪದ ಕಲಾ ತಂಡಗಳೊಂದಿಗೆ ಛತ್ತೀಸ್‍ಗಡ್. ಮಹಾರಾಷ್ಟ್ರ, ಕಾಸರಗೋಡು, ತಮಿಳುನಾಡುವಿನ ಕಲಾ ತಂಡಗಳು ಕಳೆದ ಎರಡು ದಿನಗಳಿಂದ ರಾಮನಗರ ಜಾನಪದ ಲೋಕದ ಬಯಲು ವೇದಿಕೆಯಲ್ಲಿ ಹಳ್ಳಿಸೊಗಡಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅವನತಿಯತ್ತ ಸಾಗುತ್ತಿರುವ ಅಪೂರ್ವ ಹಳ್ಳಿಗಾಡಿನ ಜಾನಪದ ಕಲೆಗಳನ್ನು ಪೆÇೀಷಿಸಲು ಜಾನಪದ ಲೋಕ ವೇದಿಕೆಯಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ವಿವರಿಸಿದರು.

ಪ್ರವಾಸಿ ಜಾನಪದ ಲೋಕೋತ್ಸವದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಈ ಹಿಂದೆ ಹಳ್ಳಿಯ ಜಾನಪದ ಕಲೆಗಳು ಸ್ಥಳೀಯವಾಗಿ ಮಾತ್ರ ಪ್ರದರ್ಶನ ಗೊಳ್ಳುತ್ತಿದ್ದು, ಅಷ್ಟಾಗಿ ಬೆಳಕಿಗೆ ಬರುತ್ತಿರಲಿಲ್ಲ. ಬೇರೆ ಬೇರೆ ಪ್ರದೇಶದ ಜನಜೀವನವನ್ನು, ಆಡು ಪಾಡುಗಳನ್ನು ಜಾನಪದ ಕುಣಿತ, ಗೀತಗಾಯನ, ವಿಭಿನ್ನ ವೇಷ ಭೂಷಣಗಳನ್ನು ಒಂದೇ ವೇದಿಕೆ ಯಲ್ಲಿ ಪ್ರತಿಬಿಂಬಿಸುವ ನಿಟ್ಟಿನಲ್ಲಿ ಪ್ರವಾಸಿ ಜಾನಪದ ಲೋಕೋತ್ಸವ ವನ್ನು ಆಯೋಜಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ಅವರು, ಜನಪದದ ಮೂಲಬೇರು ಗಳನ್ನು ಪೆÇೀಷಿಸ ಬೇಕಾಗಿದೆ. ಪೂರ್ವಜರ ಅಪೂರ್ವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ನುಡಿದರು.

ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರು, ಜಾನಪದ ಕಲೆಗಳು ಶಾಲಾ-ಕಾಲೇಜುಗಳಲ್ಲಿನ ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಸಾಮಾಜಿಕ ಜಾಲತಾಣ ಯುಗದಲ್ಲಿ ಹಳ್ಳಿಕಲೆಗಳು ನಶಿಸಿಹೋಗುತ್ತಿದ್ದು ಇವುಗಳ ಸಂರಕ್ಷಣೆಗೆ ಕಾರ್ಯ ಯೋಜನೆ ಹಾಕಿಕೊಳ್ಳಬೇಕಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕರ್ನಾಟಕ ಜಾನಪದ ಪರಿಷತ್‍ನ ಮ್ಯಾನೇಜಿಂಗ್ ಟೃಸ್ಟಿ ಆದಿತ್ಯ ನಂಜರಾಜ್,ವಿಧಾನ ಪರಿಷತ್ ಸದಸ್ಯರಾದ ಆ.ದೇವೇಗೌಡ, ಸಿ.ಎಂ. ಲಿಂಗಪ್ಪ, ಆಡಳಿತ ಮಂಡಳಿ ಸದಸ್ಯರಾದ ಜಯಪ್ರಕಾಶ್‍ಗೌಡ, ಇ.ಸಿ. ರಾಮಚಂದ್ರಗೌಡ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಜಾನಪದ ಲೋಕದಲ್ಲಿ ಪ್ರಥಮ ಜಾನಪದ ಲೋಕೋತ್ಸವ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು ಎಂದು ಪರಿಷತ್ ಆಡಳಿತಾಧಿüಕಾರಿ ಡಾ.ಗುರುವ ಬಸವರಾಜು ಮಾಹಿತಿ ನೀಡಿದರು.

ಮರಿಗೆ ಪ್ರಶಸ್ತಿ ಪ್ರದಾನ

ತಟ್ಟೆಕೆರೆಯ ಸೋರೆ ಬುರುಡೆ ಕಲಾವಿದ ಜೇನುಕುರುಬರ ಮರಿಗೆ ಬೆಂಗಳೂರಿನ ಶೀಲಾಗೌಡ ಮತ್ತು ಕ್ರಿಸ್ಟಾಫ್ ಸ್ಟಾಟ್ರ್ಸ್ ದತ್ತಿನಿಧಿಯನ್ನೊಳ ಗೊಂಡ ನಾಡೋಜ ಹೆಚ್.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿಯನ್ನು ಈ ಸಂದರ್ಭ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗು ಜಾನಪದ ಪರಿಷತ್ ಖಜಾಂಚಿ ಸಂಪತ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ದಕ್ಷಿಣ ಕೊಡಗು ಜಾನಪದ ಪರಿಷತ್ ಅಧ್ಯಕ್ಷೆ ಸುಮಿಸುಬ್ಬಯ್ಯ, ಸದಸ್ಯರಾದ ಟಿ.ಎಲ್. ಶ್ರೀನಿವಾಸ್, ರತಿ ಅಚ್ಚಪ್ಪ, ಚೆಕ್ಕೇರ ಸೂರ್ಯ, ಜೇನುಕುರುಬರ ಪ್ರದೀಪ್ ಭಾಗವಹಿಸಿದ್ದರು.