ಸುಂಟಿಕೊಪ್ಪ, ಫೆ. 15: ಕೊಡಗು ಜಿಲ್ಲಾ ದಂತ ವೈದ್ಯರ ಸಂಘದ ನೂತನ ಅಧ್ಯಕ್ಷರಾಗಿ ಪೊನ್ನಪ್ಪ ಅಧಿಕಾರ ವಹಿಸಿಕೊಂಡರು.

ಗೋಣಿಕೊಪ್ಪದ ಸ್ಪಸಸ್ ರ್ಯಾಕ್ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಡಾ. ರತೀಶ್ ಅವರಿಂದ ಡಾ.ಪೊನ್ನಪ್ಪ ಅವರು ಅಧಿಕಾರ ವಹಿಸಿಕೊಂಡರು. ಉಪಾಧ್ಯಕ್ಷರಾಗಿ ಡಾ. ರಾಮ, ಡಾ. ಚಂದ್ರು, ಕಾರ್ಯದರ್ಶಿಯಾಗಿ ಡಾ. ಕೃಪಾಶಂಕರ್, ಖಜಾಂಜಿಯಾಗಿ ಡಾ. ಶಶಿಧರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಶಿಕಾಂತ ರೈ, ಡಾ.ಅಶಿಕ್, ಡಾ.ಸೂರಾಜ್, ಡಾ.ವಿನಯ್, ಡಾ.ಬೋಪಣ್ಣ ಅಧಿಕಾರ ವಹಿಸಿಕೊಂಡರು.