ಮಡಿಕೇರಿ, ಫೆ. 15: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಕೊಡವ ಸಾಹಿತ್ಯ-ಸಂಶೋಧನಾ ಕ್ಷೇತ್ರ, ಕೊಡವ ಕಲಾ ಕ್ಷೇತ್ರ (ನಾಟಕ, ಸಿನಿಮಾ ಮತ್ತು ಗಾಯನ), ಕೊಡವ ಜಾನಪದ ಕ್ಷೇತ್ರ (ನಾಟಿ ವೈದ್ಯ ಮತ್ತು ಜಾನಪದ ಕಲೆ)-ಈ ಮೂರು ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರನ್ನು 2018 ರ ಸಾಲಿನ ಪ್ರಶಸ್ತಿಗೆ ಪರಿಗಣಿಸಲಾಗುವದು.

ಪ್ರತಿಯೊಂದು ಕ್ಷೇತ್ರಕ್ಕೆ ಒಬ್ಬರಂತೆ ಮೂವರು ಸಾಧಕರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುವದು. ಅರ್ಜಿಗಳನ್ನು ಸ್ವತ: ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಅಭಿಮಾನಿಗಳು ಶಿ¥sóÁರಸ್ಸು ಮಾಡಿ ಅರ್ಜಿ ಸಲ್ಲಿಸಬಹುದು. ಹಿಂದಿನ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿರುವ ಆದರೆ ಪ್ರಶಸ್ತಿಗೆ ಆಯ್ಕೆ ಆಗದಿರುವ ಸಾಧಕರ ಅರ್ಜಿಗಳನ್ನು ಈ ವರ್ಷವೂ ಪರಿಗಣಿಸಲಾಗುವದು. ಅವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯವಿರುವದಿಲ್ಲ. ಆದರೆ ಸಾಧನೆಯ ಪೂರಕ ವಿವರಗಳಿದ್ದಲ್ಲಿ ಅಕಾಡೆಮಿಗೆ ಕಳುಹಿಸಿಕೊಡಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಎಲ್ಲಾ ಮಾಹಿತಿಗಳನ್ನು ಕಳುಹಿಸಬೇಕು. ಅರ್ಜಿಯನ್ನು ಭಾವಚಿತ್ರ ಹಾಗೂ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಅಕಾಡೆಮಿಗೆ ಕಳುಹಿಸಿ ಕೊಡಬಹುದು.

ಪುಸ್ತಕ ಬಹುಮಾನ 2018: 2018ರ ಪುಸ್ತಕ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನಿಸ ಲಾಗಿದ್ದು, ಲೇಖಕರು ಅಥವಾ ಪ್ರಕಾಶಕರು ಅರ್ಜಿ ಸಲ್ಲಿಸಬಹು ದಾಗಿದೆ. ದಿನಾಂಕ 01-01-2018 ರಿಂದ 31-12-2018 ರ ನಡುವೆ ಪ್ರಕಟಗೊಂಡ ಪುಸ್ತಕಗಳನ್ನು 2018ರ ಸಾಲಿನ ಪುಸ್ತಕ ಬಹುಮಾನಕ್ಕೆ ಪರಿಗಣಿಸಲಾಗುವದು. ಕೊಡವ ಕವನ ಸಂಕಲನ, ಕೊಡವ ಕಥಾ ಸಂಕಲನ, ಕೊಡವ ಕಾದಂಬರಿ, ಕೊಡವ ಕಾವ್ಯ, ಕೊಡವ ನಾಟಕ, ಕೊಡವ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಧ್ಯಯನ ಗ್ರಂಥ ಹಾಗೂ ಕೊಡವ ಭಾಷೆಯಿಂದ ಇತರ ಭಾಷೆಗೆ ಅಥವಾ ಅನ್ಯ ಭಾಷೆಯಿಂದ ಕೊಡವ ಭಾಷೆಗೆ ಭಾಷಾಂತರಿತ ಕೃತಿಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವದು. ಅಕಾಡೆಮಿಯು ಹೆಚ್ಚು ಸಂಖ್ಯೆಯಲ್ಲಿ ಸ್ವೀಕರಿಸುವ ಪುಸ್ತಕಗಳ 3 ಪ್ರಕಾರಗಳನ್ನು ಮಾತ್ರ ಪುಸ್ತಕ ಬಹುಮಾನಕ್ಕೆ ಪರಿಗಣಿಸಲಾಗುವದು. ಪುಸ್ತಕಗಳ ತಲಾ 4 ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -2018 ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಯೋಜನೆ - 2018 ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಭರತ್ ಸ್ಕೌಟ್ &amdiv; ಗೈಡ್ಸ್ ಭವನ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ-571201 ಈ ವಿಳಾಸಕ್ಕೆ ಮಾರ್ಚ್, 05 ರೊಳಗೆ ಸಲ್ಲಿಸುವಂತೆ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಅವರು ತಿಳಿಸಿದ್ದಾರೆ.