ಮಡಿಕೇರಿ, ಫೆ. 13: ಒಂದೆಡೆ ಕಾಫಿ ಇಳುವರಿ ಹಾಗೂ ಬೆಲೆ ಕುಸಿತದೊಂದಿಗೆ ಕಂಗೆಟ್ಟಿರುವ ಕೊಡಗಿನ ಬೆಳೆಗಾರರಿಗೆ ಈಗಾಗಲೇ ಕರಿಮೆಣಸು ಬೆಲೆಯೂ ಇಳಿಕೆಯಾಗಿದ್ದು ಮತ್ತೆ ಬೆಲೆ ಕುಸಿಯುವ ಹಾಗೂ ಭಾರತೀಯ ಕರಿಮೆಣಸಿಗೆ ಬೇಡಿಕೆ ಕಡಿಮೆಯಾಗುವ ಭೀತಿ ಎದುರಾಗಿದೆ. ಶ್ರೀಲಂಕಾದಿಂದ ಸುಮಾರು 1800 ರಿಂದ 2000 ಟನ್‍ವರೆಗೆ ಕರಿಮೆಣಸು ಶ್ರೀಲಂಕಾ ಬಂದರು ಮೂಲಕ ಕಳುಹಿಸಲ್ಪಟ್ಟಿದ್ದು ಸದ್ಯದಲ್ಲಿಯೇ ಭಾರತ ಸೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಕೇರಳದ ವಾಣಿಜ್ಯ ವಹಿವಾಟು ಮತ್ತು ಬೆಳೆಗಾರ ಸಂಸ್ಥೆಗಳು ಖಾತರಿಪಡಿಸಿವೆ. ಆತಂಕಗೊಂಡ ಈ ಸಂಸ್ಥೆಗಳ ಪ್ರಮುಖರು ಈ ಬೆಳವಣಿಗೆ ಕುರಿತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದಾರೆÉ. ಶ್ರೀಲಂಕಾದ ಹಿರಿಯ ಸಚಿವರೊಬ್ಬರು ಆ ದೇಶದಿಂದ ಸುಮಾರು 180 ಕಂಟೈೀನರ್‍ಗಳಷ್ಟು ಕರಿಮೆಣಸು ಭಾರತಕ್ಕೆ ಸಾಗಾಟಗೊಂಡಿದ್ದು ತಾನು ಈ ಬಗ್ಗೆ ಮಧ್ಯೆ ಪ್ರವೇಶಿಸುವ ಮುನ್ನವೇ ಅಲ್ಲಿಂದ ಕಳುಹಿಸಲಾಗಿತ್ತು ಎಂದು ಖಾತರಿಪಡಿಸಿರುವದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೇರಳ ಸಂಘಟನೆಗಳ ಸಂಯೋಜಕ ಕಿಶೋರ್ ಶ್ಯಾಮ್‍ಜಿ ಅವರು ಈ ಪತ್ರವನ್ನು ಕೇಂದ್ರ ಸಚಿವರಿಗೆ ಕಳುಹಿಸಿದ್ದು, ವಿಯೆಟ್ನಾಂನಿಂದ ಈ ಭಾರೀ ಮೊತ್ತದ ಕರಿಮೆಣಸು ಕಳುಹಿಸಲ್ಪಟ್ಟಿದೆ. ಶ್ರೀಲಂಕಾದಿಂದ ಭಾರತಕ್ಕೆ ಕಳುಹಿಸಲು ಯಾವದೇ ಕಾನೂನಾತ್ಮಕ ನಿರ್ಬಂಧವಿಲ್ಲದಿರುವದರಿಂದ ವಿಯೆಟ್ನಾಂನ ಈ ಕರಿಮೆಣಸನ್ನು ಶ್ರೀಲಂಕಾದ ಉತ್ಪನ್ನವೆಂದು ದೃಢೀಕರಿಸಿ ಅತಿ ನೈಪುಣ್ಯತೆಯಿಂದ ಕಳುಹಿಸಲಾಗಿದೆ. ಸದ್ಯದಲ್ಲಿಯೇ ಈ ಭಾರೀ

(ಮೊದಲ ಪುಟದಿಂದ) ಪ್ರಮಾಣದ ಕರಿಮೆಣಸು ಗುಜರಾತ್‍ನ ಮುಂದ್ರಾ, ಮುಂಬಯಿಯ ನವ ಶೇವಾ, ತಮಿಳುನಾಡುವಿನ ಚೆನ್ನೈ ಹಾಗೂ ತೂತುಕೊಡಿ ಹಾಗೂ ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಬಂದರುಗಳನ್ನು ತಲಪಲಿದೆ.

ಬಳಿಕ ಭಾರತದ ಎಲ್ಲ ಪ್ರÀದೇಶಗಳಲ್ಲಿ ಮುಕ್ತವಾಗಿ ಮಾರಾಟಗೊಳ್ಳಲಿದೆ ಎಂದು ಕಿಶೋರ್ ಶ್ಯಾಮ್‍ಜಿ ತಮ್ಮ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾದಲ್ಲಿ ಕಡಿಮೆ ತೆರಿಗೆ ಪಾವತಿಸುವ ಅವಕಾಶವಿರುವದರಿಂದ ಈ ಭಾರೀ ಮೊತ್ತದ ಕರಿಮೆಣಸುವಿಗೆ ಒಟ್ಟು ಶೇ. 43 ರಷ್ಟು ತೆರಿಗೆ ವಿನಾಯ್ತಿಯಿದೆ. ಅಲ್ಲದೆ ಈ ಕರಿಮೆಣಸುವಿನಲ್ಲಿ ಮಯನ್‍ಮಾರ್, ಬಾಂಗ್ಲಾದೇಶ ಹಾಗೂ ನೇಪಾಳಗಳಿಂದ ಕಳ್ಳಸಾಗಾಣಿಕೆ ಮಾಡಲ್ಪಟ್ಟ ಕರಿಮೆಣಸೂ ಸೇರಿಕೊಂಡಿದೆ. ಶ್ರೀಲಂಕಾದ ಉತ್ಪನ್ನವೆಂದು ದೃಢೀಕರಿಸುವ ಮೂಲಕ ವಿಯೆಟ್ನಾಂ ಕರಿಮೆಣಸುವಿಗೆ ಟನ್‍ವೊಂದಕ್ಕೆ ಕೇವಲ 3000 ಡಾಲರ್ ತೆರಿಗೆ ಪಾವತಿಸಲಾಗುತ್ತದೆ. ಇದರಿಂದ ಟನ್‍ವೊಂದಕ್ಕೆ 4,100 ಡಾಲರ್ ಅವರಿಗೆ ಉಳಿತಾಯವಾಗುತ್ತದೆ. ಇದು ವಿದೇಶೀ ವಿನಿಮಯ ನಿರ್ವಹಣಾ ಕಾಯ್ದೆ (ಈಇಒಂ) ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಅನಧಿಕೃತ ಅಂತರ್ರಾಷ್ಟ್ರೀಯ ವ್ಯವಹಾರದಿಂದಾಗಿ ಭಾರತದ ಕರಿಮೆಣಸು ಬೆಳೆಗಾರರು ತಮ್ಮ ಕರಿಮೆಣಸು ಬೆಳೆಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದೆ ತೀವ್ರ ಬವಣೆ ಅನುಭವಿಸಲಿದ್ದು ಕೇಂದ್ರ ಸರಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಭಾರತೀಯ ಬೆಳೆಗಾರರನ್ನು ತಕ್ಷಣ ರಕ್ಷಿಸುವದು ಅತ್ಯಗತ್ಯವಾಗಿದೆ ಎಂದು ಸಚಿವರ ಗಮನಕ್ಕೆ ತರಲಾಗಿದೆ.