ಸೋಮವಾರಪೇಟೆ, ಫೆ. 13: ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯಿಂದ ಮೈಸೂರಿನ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿದ್ದ 8ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಯಲ್ಲಿ ಇಲ್ಲಿನ ಚೌಡ್ಲು ಗ್ರಾಮದ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

2ನೇ ತರಗತಿಯ ಸಾತ್ವಿಕ್ ಕತಾ ವಿಭಾಗದಲ್ಲಿ ತೃತೀಯ ಹಾಗೂ ಯೋಗ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿದ್ದಾನೆ. ಮೂರನೇ ತರಗತಿಯ ಮೋಹಿತ್ ಕತಾ ವಿಭಾಗದಲ್ಲಿ (ಪ್ರ), ಯೋಗ ವಿಭಾಗದಲ್ಲಿ (ಪ್ರ), ಎಂ. ಶ್ವೇತ ಕತಾ ವಿಭಾಗದಲ್ಲಿ (ದ್ವಿ), ದೀಕ್ಷಿತ್ ಕತಾ ವಿಭಾಗದಲ್ಲಿ (ದ್ವಿ) ಮತ್ತು ಯೋಗ ವಿಭಾಗದಲ್ಲಿ (ದ್ವಿ), ಶಾದಿಶ್ ಕತಾ ವಿಭಾಗದಲ್ಲಿ (ತೃ) ಹಾಗೂ ಯೋಗ ವಿಭಾಗದಲ್ಲಿ (ದ್ವಿ) ಸ್ಥಾನಗಳಿಸಿದ್ದಾರೆ.

4ನೇ ತರಗತಿಯ ಗೋಕುಲ್ ಸೋಮಣ್ಣ ಕತಾ ವಿಭಾಗದಲ್ಲಿ (ಪ್ರ) ಹಾಗೂ ಯೋಗ ವಿಭಾಗದಲ್ಲಿ (ತೃ), ದೃಪದ್ ಕತಾ ವಿಭಾಗದಲ್ಲಿ (ತೃ) ಹಾಗೂ ಯೋಗ ವಿಭಾಗದಲ್ಲಿ (ತೃ) ಸ್ಥಾನಗಳಿಸಿದ್ದಾರೆ.

5ನೇ ತರಗತಿಯ ಲೋಹಿತ್ ಕತಾ ವಿಭಾಗದಲ್ಲಿ (ತೃ), ಗಗನ್ ಕುಮಿತೆ ವಿಭಾಗದಲ್ಲಿ (ಪ್ರ), ಕತಾ ವಿಭಾಗದಲ್ಲಿ (ಪ್ರ) ಹಾಗೂ ಯೋಗ ವಿಭಾಗದಲ್ಲಿ (ತೃ), ಪ್ರಣೀತ್ ಶೆಟ್ಟಿ ಕತಾ ವಿಭಾಗದಲ್ಲಿ (ತೃ) ಸ್ಥಾನವನ್ನು ಪಡೆದಿದ್ದಾರೆ.