*ಗೋಣಿಕೊಪ್ಪಲು, ಫೆ. 13: ರೂ. 50 ಲಕ್ಷ ಅನುದಾನದಲ್ಲಿ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಭಾಗಗಳ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಚಾಲನೆ ನೀಡಿದರು.

ಬಾಡಗರÀಕೇರಿ ಮೃತ್ಯುಂಜಯ ದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷ ಅನುದಾನದಲ್ಲಿ, ಬಿರುನಾಣಿ ಲಕ್ಷಿ ನರಸಿಂಹ ದೇವಸ್ಥಾನ ರಸ್ತೆ ನಿರ್ಮಾಣ ರೂ. 5 ಲಕ್ಷದಲ್ಲಿ, ಪೂಕಾಡು, ಗುಡ್ಡೋಣಿ, ಪಾಂಡಿಕಡವು ರಸ್ತೆ 5 ಲಕ್ಷ ಅನುದಾನದಲ್ಲಿ, ಕೆ.ಕೆ.ಆರ್. ಟೀ ಎಸ್ಟೇಟ್ ಮುಖ್ಯ ರಸ್ತೆ ರೂ. 10 ಲಕ್ಷ ಅನುದಾನದಲ್ಲಿ ಮತ್ತು ಪರಕಟಗೇರಿ, ಕುಂಗೀರ ಬೈಲು ಸಂಪರ್ಕ ರಸ್ತೆಗೆ ರೂ. 5 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ ಎಂದು ಜಿ.ಪಂ. ಅಧ್ಯಕ್ಷ ಹರೀಶ್ ಮಾಹಿತಿ ನೀಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಾ.ಪಂ. ನೆಲ್ಲಿರ ಚಲನ್ ಕುಮಾರ್, ಬಿರುನಾಣಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಣ್ಣಳಮಾಡ ರಾಯ್, ಬಿರುನಾಣಿ ಗ್ರಾ.ಪಂ. ಸದಸ್ಯ ಸುನಿಲ್, ಸ್ಥಳಿಯರಾದ ಕರ್ತಮಾಡ ಚುಚ್ಚ, ಧನು, ಕಾಯಪಂಡ ಮಧು, ಅಜೀತ್, ಪ್ರವೀಣ್, ಸುರೇಶ್, ಸುಬ್ರಮಣಿ ಸೇರಿದಂತೆ ಹಲವರು ಹಾಜರಿದ್ದರು.