ಮಡಿಕೇರಿ, ಫೆ. 13: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ತಾ. 16 ರಿಂದ ಆರಂಭಗೊಳ್ಳಲಿದೆ. ತಾ. 16 ರಂದು ರಾತ್ರಿ 8 ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ಪ್ರಸಕ್ತ ವರ್ಷದ ಉತ್ಸವಕ್ಕೆ ಚಾಲನೆ ದೊರೆಯಲಿದ್ದು ತಾ. 26 ರಂದು ದೇವರ ಅವಭೃತ ಸ್ನಾನದೊಂದಿಗೆ ತೆರೆಕಾಣಲಿದೆ. ಈ ಅವಧಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.

ತಾ. 17 ರಂದು ಬೆ. 11 ರಿಂದ ನಿತ್ಯಪೂಜೆ ಸಂಜೆ 7 ಗಂಟೆಗೆ ತೂಚಂಬಲಿ ತಾ. 18 ರಂದು ಮುಂಜಾನೆ 5ಕ್ಕೆ ಉತ್ಸವ ಮೂರ್ತಿ ದರ್ಶನ 11 ರಿಂದ ನಿತ್ಯಪೂಜೆ ಸಂಜೆ 7ಕ್ಕೆ ತೂಚಂಬಲಿ ನಡೆಯಲಿದೆ. ತಾ. 19 ರಂದು ಬೆ. 5ಕ್ಕೆ ಉತ್ಸವ ಮೂರ್ತಿ ದರ್ಶನ 10 ಗಂಟೆಗೆ ಭಂಡಾರ ಬರುವದು 11ಕ್ಕೆ ನಿತ್ಯಪೂಜೆ ಸಂಜೆ 7ಕ್ಕೆ ತೂಚಂಬಲಿ ಜರುಗಲಿದೆ. ತಾ. 20 ರಿಂದ 22 ರವರೆಗೆ ಪ್ರಾತಃಕಾಲ 5 ರಿಂದ ಇರುಬಳಕು 11 ಗಂಟೆಯಿಂದ ನಿತ್ಯಪೂಜೆ, ಸಂಜೆ 7ಕ್ಕೆ ತೂಚಂಬಲಿ. ತಾ. 23 ರಂದು ಎಂದಿನಂತೆ ಇರುಬಳಕು, ನಿತ್ಯಪೂಜೆ ಯೊಂದಿಗೆ ಹರಕೆಬಳಕು ತುಲಾಭಾರ ಸಂಜೆ ತೂಚಂಬಲಿ ಹಾಗೂ ಉತ್ಸವ ಮೂರ್ತಿ ದರ್ಶನವಿದೆ. ತಾ. 24 ರಂದು ಬೆ. 5 ಕ್ಕೆ ಇರುಬಳಕು, ಹರಕೆ ಬಳಕಿನ ಪ್ರಸಾದ ವಿತರಣೆ 11 ಗಂಟೆಗೆ ನಿತ್ಯಪೂಜೆ ಹರಕೆ ಬಳಕು, ತುಲಾಭಾರ, ಸಂಜೆ ತೂಚಂಬಲಿ ಉತ್ಸವ ಮೂರ್ತಿ ದಶರ್Àನ ನಡೆಯಲಿದೆ.