ಮಡಿಕೇರಿ, ಫೆ. 13: ಕದನೂರು ಗ್ರಾ.ಪಂ. ವ್ಯಾಪ್ತಿಯ ಮೈತಾಡಿ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಚಪ್ಪಂಡ ಕುಟುಂಬ ಹಾಗೂ ಇತರರಿಗೆ ಕುಡಿಯುವ ನೀರಿನ ಬವಣೆ ಎದುರಾಗಿದೆ ಎಂದು ಅಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮದ ಅಯ್ಯಪ್ಪ ದೇಗುಲ ಬಳಿ ಸಾರ್ವಜನಿಕ ಉಪಯೋಗಕ್ಕಾಗಿ ಈ ಹಿಂದೆ ನಿರ್ಮಿಸಿರುವ ಕೊಳವೆ ಬಾವಿಗೆ ಮೋಟಾರು ಯಂತ್ರದೊಂದಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಕೇವಲ ಹಣವನ್ನು ವ್ಯರ್ಥಗೊಳಿಸಲಾಗಿದೆ ಎಂದು ಅಲ್ಲಿನ ನಿವಾಸಿ ಚಪ್ಪಂಡ ಮಂದಣ್ಣ ಹಾಗೂ ಇತರರು ಟೀಕಿಸಿದ್ದು, ಈ ಬಗ್ಗೆ ತುರ್ತು ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಒತ್ತಾಯಿಸಿದ್ದಾರೆ.