ನಾಪೆÇೀಕ್ಲು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿತರಿಸುವ ಸೈಕಲ್‍ಗಳನ್ನು ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಕೇಟೋಳಿರ ಪಿ.ಕುಟ್ಟಪ್ಪ, ಬಾತ್ಮಿದಾರ ಕಲ್ಯಾಟಂಡ ಸುಧಾ ಗಣಪತಿ, ನಿರ್ದೇಶಕರಾದ ಬಡಕಡ ದೀನಾ ಪೂವಯ್ಯ, ಪರದಂಡ ಪ್ರಮಿಳಾ ಪೆಮ್ಮಯ್ಯ, ಮುಖ್ಯ ಶಿಕ್ಷಕ ಅನಿಲ್ ರಾಜ್ ಇದ್ದರು.ಮಡಿಕೇರಿ: ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಸೈಕಲ್‍ಗಳ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೇಂಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಿ 36 ವಿದ್ಯಾರ್ಥಿಗಳಿಗೆ ಸೈಕಲ್‍ಗಳನ್ನು ವಿತರಿಸಿದರು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎಸ್. ಸುಬ್ಬಯ್ಯ, ಸಂಸ್ಥೆಯ ಪ್ರಾಂಶುಪಾಲ ಎ. ಶ್ರೀಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯ ಎ.ಟಿ. ಬಾಲಕೃಷ್ಣ, ವಿದ್ಯಾರ್ಥಿ ಪೋಷಕರು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.