ಅರ್ಥಪೂರ್ಣ ಸಂಗತಿಯಾಗಿ ಬನ್ನಿ. ನಿಮ್ಮನ್ನು ನೋಡಲು ಬಂದಂದಿನಿಂದ ನನ್ನ ಜೀವನ ಶೈಲಿ ಬದಲಾದದಂತು ನಿಜ ನೀವು ಇಷ್ಟ ಆದ್ರಿ.. ನಿಮ್ಮ ಸೈಲೆಂಟ್ ಇಷ್ಟ ಆಯ್ತು... ನಿಮ್ಮ ಹೆಸರಂತೂ ತುಂಬಾನೇ ಇಷ್ಟಆಯ್ತು, ನಿಮ್ಮ ಮನೆಯವರು ಮನಸ್ಸಿಗೆ ಹತ್ರ ಆದ್ರೂ. ಇಷ್ಟೆಲ್ಲಾ ಆದ ಮೇಲೆ ಇನ್ಯಾಕೆ ತಡ? ಮದುವೆ ಮಾಡಿಕೊಡಿ ಅಂದ್ರೆ ಇನ್ನೊಂದು ಆರು ತಿಂಗಳು ಪ್ರೀತಿ ಮಾಡಿಕೊಂಡು ಅಲ್ಲೇ ಬಿದ್ದಿರು ಅಂದ್ರಿ. ನೋ ಪ್ರಾಬ್ಲಂ! ಕಾಯೋದ್ರಲ್ಲೂ ಒಂಥರಾ ಕಿಕ್ ಇದೆ ಬಿಡಿ, ಇನ್ನೇನು ಬರೀಲಿ? ಗಂಟೆ ರಾತ್ರಿ ಹನ್ನೊಂದು ನಲವತ್ತೈದು ಆಗಿದೆ ದೆವ್ವಗಳು ಒಡಾಡೋ ಈ ಟೈಮ್ನಲ್ಲಿ ಯಾವದಾದರೂ ಹಾರರ್ ಸ್ಟೋರಿ ಹುಟ್ಟಬೇಕು ಅಷ್ಟೇ. ರೋಮ್ಯಾಂಟಿಕ್ ಆಗಿ ಏನು ಬರೆಯೊಕ್ಕಾಗಲ್ಲ... ಇಲ್ಲಪ್ಪ... ನನ್ನ ಮುದ್ದುನ ನೆನಸಿಕೊಂಡ್ರೆ ಸಾಕು ಬೆಂಗಾಡಲ್ಲಿದ್ರು ಫುಲ್ ರೊಮ್ಯಾಂಟಿಕ್ ಫೀಲ್‍ಗೆ ಬಂದು ಬಿಡ್ತೀನಿ ನಾನು... ಮುದ್ದು. ನಾನು ನನ್ನವಳಾಗುವಳ ಕುರಿತು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೀನಿ. ಹಾಗಂತ ನೀವು ಹೀಗೇ ಇರಬೇಕು ಹಾಗೇ ಇರಬೇಕು ಎಂದು ನಿರ್ಬಂಧಿಸುವದಿಲ್ಲ. ನಾನು ಹೇಳಲು ಹೊರಟಿದ್ದು ನಾನು ಹೇಗೆ ನೋಡಿಕೊಳ್ಳುತ್ತೇನೆ ಅಂತ. ನಾನು ಈ ಮಾತೊಂದನ್ನು ಹಲವಾರು ಬಾರಿ ಹಲವರ ಮುಂದೆ ಹೇಳಿದ್ದೇನೆ. ನನ್ನ ಹುಡುಗಿಯನ್ನು ನಾನು ಹೂವು ತರ ನೋಡಿಕೊಳ್ಳುತ್ತೇನೆ ಎಂದು ಖಂಡಿತವಾಗಲೂ ಹಾಗೆ ನೋಡಿಕೊಳ್ಳುತ್ತೇನೆ ಮುದ್ದು. ನಮ್ಮ ನಿರೀಕ್ಷೆಗಳನ್ನೆಲ್ಲ ನಿಮ್ಮ ಮೇಲೆ ಹೇರುವದು ತಪ್ಪು ಎಂಬ ಭಾವನೆ ನನ್ನದು. ಆದರೆ ನಿಮ್ಮ ನಿರೀಕ್ಷೆಗೆ ತಕ್ಕನಾಗಿ ಅಗತ್ಯವೆನಿಸಿದರೆ ಬದಲಾಗಲು ನಾನು ಸಿದ್ಧ. “ಬಯಕೆಗಳ ಬುತ್ತಿಯ ಕಟ್ಟಿರುವೆ ನಿನಗಾಗಿ, ನೀ ಬಾ ಜೊತೆಯಾಗಿ, ಈ ಬಾಳ ಬೆಳಕಾಗಿ, ಶ್ರುತಿ ಸೇರಿ ಸ್ವರವಾಗಿ, ಹಾಡಿನ ಪಲ್ಲವಿ ಯಾಗಿ ಸಂಗೀತದ ಸುಧೆಯಾಗಿ ನೀ ನನ್ನ ಸತಿಯಾಗಿ ಎ ಮುದ್ದು ಹುಡುಗಿ ಹೇಗೆ ತಡ್ಕೋತ್ತಿರಾ ಈ ಪೆದ್ದು ಹುಡುಗನನ್ನು? ಜೀವನ ಪೂರ್ತಿ ನೀವು ಓದಲೇಬೇಕು ಅಂತ ಮಾತ್ರ ಹಠ ಮಾಡುತ್ತೇನೆ ನಮ್ಮ ಪ್ಯೂಚರಿಗೆ ಆಗಿ ಆದ್ರೂ ಓದಿ ಪ್ಲೀಸ್ ನೀವು ತುಂಬಾ ಬ್ರಿಲಿಯಂಟ್ ಇದ್ದಿರಾ ಸ್ವಲ್ಪ ಪ್ರಯತ್ನ ಹಾಕಿದರೂ ಸಾಕು ಏನಾದರೂ ಸಾಧಿಸಬಹುದು. ನನ್ನ ಮಧುರವಾದ ಭಾವನೆಗಳಿಗೆ ಸಂವೇದನೆಗಳಿಗೆ ಸರಿಯಾಗಿ ಸ್ಪಂದಿಸೋ ಹೃದಯ ನಿಮ್ಮಲ್ಲಿದೆ ಅನಿಸಿದೆ ಹಾಗೆ ನಡ್ಕೋತ್ತಿರಲ್ವ ಮುದ್ದು. ಮುದ್ದು ನಿನ್ನೆ ನಿಮ್ಮ ಜೊತೆ ಚಾಟ್ ಮಾಡುವಾಗ ನನ್ನ ಲವರಿಗೆ ಪತ್ರ ಬರೆಯುತ್ತಿದ್ದೇನೆ ಅಂತ ಹೇಳಿ ಏನೂ ಕಳುಹಿಸುತ್ತಿದ್ದೆ. ನಿಮಗೆ ಆಗ ನನಗರಿವಿಲ್ಲದಂತೆ ನನಗೆ ಕಣ್ಣೀರು ಬಂತು ತಮಾಷೆಗೂ ಬೇರೆಯವರನ್ನು ನೆನೆಸಿ ಕೊಳ್ಳಲಾಗುತ್ತಿಲ್ಲ ಮುದ್ದು ತುಂಬಾನೇ ಹಚ್ಕೊಂಡುಬಿಟ್ಟಿದ್ದೀನಿ ಮುದ್ದು. I ಟove ಥಿou so muಛಿh ಮುದ್ದು. “ಪುಸ್ತಕದ ನಡುವೆ ನವಿಲು ಗರಿಯ ಇರಿಸಿ, ಮರಿ ಹಾಕುವದೆಂದು ಬಯಸಿ, ಮರಿ ಹಾಕುವದೆಂದು ಕಾಯುವ ಪರಿಯೇ ಭರವಸೆ.” ಎಲ್ಲಕ್ಕಿಂತ ಮೊದಲು ಒಂದು ವಿಷಯ ಮೊದಲು ಮನದಟ್ಟಾಗಬೇಕು. ನೀವು ಮನಃಪೂರ್ವಕವಾಗಿ ನನ್ನ ಒಪ್ಪಿಕೊಂಡಿದ್ದರೆ ತುಂಬಾ ಸಂತೋಷ ಅಲ್ಲದೇ ಮನೆಯವರ ಒತ್ತಡಕ್ಕೊ.. ಸಮಯ ಕಳೆಯುತ್ತಿದೆ ಎಂತಲೋ... ಮಾತ್ರ ಕಮಿಟ್ ಆಗಬೇಡಿ. ಮದುವೆ ಎಂಬದು ಜೀವನದಲ್ಲಿ ಒಂದೇ ಸಲ ಆಗುವಂಥದ್ದು ಯೋಚಿಸಿ ನಿರ್ಧರಿಸಿ ನಿರ್ಧಾರಕ್ಕೆ ಇನ್ನೂ ಸಮಯವಿದೆ.

“ಲೋಕದ ಸಿಹಿಯೆಲ್ಲಾ ಇರಲಿ ನಿನಗೆ ನಿನ್ನ ನೋವುಗಳು ಬರಲಿ ನನ್ನ ಪಾಲಿಗೆ, ಎದೆಯಲ್ಲಿ ಇಡುವೆ ನಿನ್ನ ಬೆಚ್ಚಗೆ,ನಗುತ್ತಾ ಇರು ಎಂದೆಂದೂ ಹೀಗೆ.” ನಾನು ಅಮ್ಮನೊಂದಿಗೆ ಆಗಾಗ್ಗೆ ಹೇಳುತ್ತಿರುತ್ತೇನೆ ಹೆಣ್ಣೊಂದು ಮದುವೆಯಾಗಿ ತನ್ನ ಮನೆ ಬಿಟ್ಟು ತಾನು ಎಂದೂ ನೋಡದ ಮನೆ, ಮನೆ ಮಂದಿಯ ನಡುವೆ ಬಂದು ಬದುಕುವ ಸಾಹಸ ಇದೆಯಲ್ಲ ಅದಕ್ಕಿಂತ ದೊಡ್ಡ ಹಿಂಸೆ ಬೇರೊಂದಿಲ್ಲ!!! ಇದನ್ನು ಅರ್ಥ ಮಾಡಿಕೊಂಡು ಹೊಂದಿಕೊಳ್ಳಲು ಸೂಕ್ತ ಅವಕಾಶ ಕಲ್ಪಿಸಬೇಕು. ಅಪ್ಪ ಅಮ್ಮ ಎಲ್ಲಾ ವಿಷಯದಲ್ಲೂ ನಿನಗೆ ಉತ್ತಮವಾಗಿ ಸ್ಪಂದಿಸುತ್ತಾರೆಂಬ ಭರವಸೆ ನನಗಿದೆ. ನನ್ನದು ಮಾತು ಸ್ವಲ್ಪ ಕಡಿಮೆ ತುಂಬಾನೇ ಡೀಮೆರಿಟ್ಸ್‍ಗಳಿವೆ ಮುಂದೆ ಹೋಗ್ತಾ ಹೋಗ್ತಾ ಗೊತ್ತಾಗುತ್ತದೆ ಎಲ್ಲದರಲ್ಲೂ ಪರಿ ಪೂರ್ಣವಾಗಿದ್ದರೆ ನಿಮಗೆ ಕೆಲಸ ಇರಲ್ಲ ಸ್ವಲ್ಪನಾದರೂ ಡೀಮೆರಿಟ್ಸ್‍ಗಳು ಇರಬೇಕಂತೆ ಆಗ ಮಾತ್ರ ಹುಡುಗಿಯರು ಇವನನ್ನು ರಿಪೇರಿ ಮಾಡಬಹುದು ಅಂತ ಒಪ್ಪಿಕೊಳ್ಳುತ್ತಾರಂತೆ ಸೋ ನಿಮಗೆ ತಿದ್ದಲು ಅವಕಾಶಗಳಿದೆ ಹಾಗಂತ ಬ್ಯಾಡ್ ಹ್ಯಾಬಿಟ್ಸ್ ಏನೂ ಇಲ್ಲ, ನೋ ಸ್ಮೋಕಿಂಗ್ ನೋ ಡ್ರಿಂಕಿಂಗ್ ಗುಟ್ಕಾ ಎಲೆ ಅಡಿಕೆ ನಥಿಂಗ್.

“ಮಾತು ಬರದ ಮೌನಿ ನಾನು ಮನ್ನಿಸೆನ್ನ ಮನವನ್ನು ಪದಗಳಲ್ಲಿ ಕಟ್ಟಿರುವೆ ಪ್ರೀತಿಯನ್ನು ತೊಡಿಸಿಕೊ ಈ ಮೂಕನ ಮಾಲೆಯನ್ನು ಕಲ್ಪನೆಗೂ ಮಿಗಿಲು ಈ ನನ್ನ ಪ್ರೀತಿಯೂ ನನಗೊಂದೇ ದಿಗಿಲು ಮರೆಯದಿರು ಈ ಮೌನಿಯನು...” ಇದುವರೆಗೆ ಹೇಗೆ ಇದ್ರಿ ಅದು ನನಗೆ ಮುಖ್ಯವಲ್ಲ, ಅದನ್ನು ನಾನು ಪ್ರಶ್ನಿಸುವದು ಇಲ್ಲ. ಇನ್ನು ಮುಂದೆ ಹೇಗಿರುತ್ತೀರಿ ಅದು ನನಗೆ ಮುಖ್ಯ. ಹಾಗಂತ ಹೀಗೇ ಇರು ಎಂದೂ ಕೂಡ ನಿರ್ಬಂಧಿಸುವುದಿಲ್ಲ. “ನಗುತಿರಲಿ ಮನಸ್ಸು, ಬಾರದಿರಲಿ ಮುನಿಸು. ನಗುತ್ತಿದ್ದರೆ ಸೊಗಸು ನನಸಾಗಲಿ ನಿನ್ನೆಲ್ಲ ಸಿಹಿ ಕನಸು.”

ನನ್ನ ಪ್ರಕಾರ ಮದುವೆ ಎಂಬದು ಕೇವಲ ಎರಡು ದೇಹಗಳ ಬೆಸುಗೆಯಲ್ಲ. ಆದರೆ ದೇಹಗಳ ಬೇಸುಗೆಯಾಗದೆ ಅಲ್ಲಿ ಮದುವೆಯಿಲ್ಲ. ಕೇವಲ ಅದೊಂದೇ ಮದುವೆಯನ್ನು ಜೀವಂತವಾಗಿಡುವದಿಲ್ಲ ಅಲ್ಲಿ ಪ್ರೇಮವಿರಬೇಕು, ಅನುರಾಗ ವಿರಬೇಕು, ಹೊಂದಾಣಿಕೆ ಇರಬೇಕು. ಇವೆಲ್ಲವುಗಳಿಂದ ತೊಯ್ದ ಮಮತೆ ಅಲ್ಲಿ ಮೂಡಬೇಕು ನನ್ನ ಹೆಚ್ಚಿನ ಸ್ನೇಹಿತರು ಸಂಸಾರಸ್ಥರು ಅವರು ನಿತ್ಯದ ಆಗು ಹೋಗುಗಳನ್ನು ನನ್ನೊಂದಿಗೆ ಚರ್ಚಿಸುತ್ತಿರುತ್ತಾರೆ ಮತ್ತು ಆಗಾಗ್ಗೆ ಹೇಳುತ್ತಿರುತ್ತಾರೆ ನೀನು ಮದುವೆಯಾಗಿ ನೋಡು ಕಷ್ಟ ಏನೆಂಬದು ಅರ್ಥವಾಗುತ್ತದೆ ಎಂದು ಹಾಗೆಲ್ಲ ಯೋಚಿಸುತ್ತೇನೆ ಇವರಿಗೆ ಬದುಕಲು ಗೊತ್ತಿಲ್ಲವೇ? ಅಥವಾ ಬದುಕೇ ಹೀಗೆನಾ!!! ಅಂತ ಜೀವನದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಸಾಮಾನ್ಯ ಸಣ್ಣ ಸಣ್ಣ ವಿಷಯಗಳನ್ನು ಬೆಳೆಸುವ ಗೋಜಿಗೆ ಹೋಗುವದು ಬೇಡ.

“ಎಲ್ಲಿಯವರೆಗೆ ನಾವು ಒಬ್ಬರ ವ್ಯಕ್ತಿತ್ವವನ್ನು ಒಬ್ಬರು ಪ್ರೀತಿಸುತ್ತೇವೆಯೊ ಅಥವಾ ಗೌರವಿಸುತ್ತೇವೆಯೋ ಅಲ್ಲಿಯವರೆಗೆ ನಿಜವಾಗಲೂ ಯಾವದೇ ಜಗಳ ಭಿನ್ನಾಭಿಪ್ರಾಯ ಬಾರದು ಎಂಬದು ನನ್ನ ಅನಿಸಿಕೆ”.

ನನಗೆ ಅನ್ನಿಸಿದ್ದು ಮತ್ತೊಂದು ಅಂಶವೆಂದರೆ ಗಂಡಿನ ಮನೆ ನೋಡಲು ಬರುವಾಗ ಹೆಣ್ಣು ಜೊತೆಯಲ್ಲಿಯೇ ಬರಬೇಕು ಅಂತ ಕಾರಣ ಇಷ್ಟೆ ಅಲ್ಲಿ ಬಾಳ್ವೆ ನಡೆಸುವವಳು ಅವಳು ಮೊದಲು ಅವಳು ಅಲ್ಲಿಯ ಪರಿಸ್ಥಿತಿಯ ನೋಡಬೇಕು. ನಾನು ಇಲ್ಲಿ ಬಾಳಬಹುದು ಎಂಬದು ಆಕೆಗೆ ಅನ್ನಿಸಬೇಕು. ನಮ್ಮ ಮನೆಯ ವೀಡಿಯೋ ಚಿತ್ರಣವನ್ನು ಕಳಿಸುವ ಪ್ರಯತ್ನ ಮಾಡುತ್ತೇನೆ ನಮ್ಮ ಮನೆ ಚಿಕ್ಕದು ಚಿಂತಿಸಬೇಡಿ ಮನಸ್ಸು ದೊಡ್ಡದಾಗಿದೆ.

ಬಾಳ ಹಾದಿಯಲ್ಲಿ ಬಾ ಗೆಳತಿ ಬವಣೆಗಳ ಬದಿಗೊತ್ತಿ ಭರವಸೆಗಳ ಎದೆಗೊತ್ತಿ ಆಧುನಿಕತೆಯ ಭರಾಟೆ ತರಾಟೆಗೆ ಸ್ವೀಕರಿಸಿ ಅಂತರಂಗಗಳ ಅರಿಯುತ್ತಾ ಬದುಕು ಬಂಗಾರ ಮಾಡೋಣ ನಿನ್ನ ಸೋಲು ಕೇವಲ ನಿನ್ನದಲ್ಲ ನನ್ನ ಸೋಲು ಕೇವಲ ನನ್ನದಲ್ಲ ನಮ್ಮಿಬ್ಬರದು ಅದು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವದರಲ್ಲಿ ಅರ್ಧ ಜೀವನ ಸರಿದಿರುತ್ತದೆ ಎನ್ನುತ್ತಾರೆ. ನಿಜವಾದ ಪ್ರೀತಿಗೆ ಅಷ್ಟು ಸಮಯ ಬೇಕಾಗಿಲ್ಲ ಅದಕ್ಕೆ ಅರ್ಥೈಸುವ ಅವಶ್ಯಕತೆಯೂ ಇಲ್ಲ ಒಳ ಮೂಡುವ ಕಾಳಜಿಯೇ ಸಾಕು. ನಿನ್ನ ಇಷ್ಟ ಕಷ್ಟಗಳನ್ನೆಲ್ಲಾ ನೋಡಿಕೊಳ್ಳುವೆ. ನಿನ್ನೆಲ್ಲಾ ಕಾರ್ಯಗಳ ಮೆಚ್ಚಿಕೊಳ್ಳುವ ಕೆ.ಎಸ್.ನ’ರವರು ಹೇಳುವಂತೆ “ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದೊಂದು ಕನಸ ಕಂಡು ಮಾತಿ ಗೊಲಿಯದ ಅಮೃತವುಂಡು ದುಃಖ ಹಗುರವೆನುತಿರೆ ಪ್ರೇಮವೆನ್ನಲು ಹಾಸ್ಯವೇ “ಹೌದು ಪ್ರೀತಿಗೆ ಮಿಗಿಲಾದುದು ಯಾವುದೂ ಇಲ್ಲ “ಸುಂದರ ಬದುಕು ಕೇವಲ ಕಲ್ಪನೆ ಅಷ್ಟೆ ನಿಜವಾದ ಬದುಕು ಕಲ್ಪನೆಗಿಂತಲೂ ಸುಂದರ ಅಂತಹ ಬದುಕು ನಮ್ಮದಾಗಲಿ...

ಬಾಳ ಹಾದಿಯಲ್ಲಿ ಬಾ ಗೆಳತಿಯಾಗಿ

ಬವಣೆಗಳ ಬದಿಗೊತ್ತಿ ಭರವಸೆಗಳ ಎದೆಗೊತ್ತಿ ಭಾವನೆಗಳ ಬಿಗಿದಪ್ಪಿ ನನ್ನೆದೆಯ ತುಂಬು ಪ್ರೀತಿಯಾಗಿ

ಈ ಹೃದಯದ ಬಡಿತದ ಶ್ರುತಿಯಾಗಿ...

ಇತಿ ನಿನ್ನ ನಿರೀಕ್ಷೆಯಲ್ಲಿ ಕಾಯುತ್ತಿರುವ... ಪ್ರೇಮಿ.