ಒಂದು ಪ್ರೇಮ ಪತ್ರ ಬರೆಯಬೇಕೆಂಬದು ಬಹುದಿನಗಳ.. ಅಲ್ಲಾಲ್ಲ.. ಬಹು ವರ್ಷಗಳ ಆಸೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಈ ಮಾಡ್ರನ್ ಯುಗದಲ್ಲಿ ಪತ್ರಕ್ಕೇನಿದೇ ಬೆಲೆ ಅನ್ನಿಸಿದರೂ... ಎಷ್ಟೇ ಮೆಸೇಜ್ ಇಮೇಲ್ ವಾಟ್ಸಾಪ್ ಇದ್ದರೂ ಭಾವನೆಗಳನ್ನು ಮನ ಸ್ಪರ್ಶಿ ಮಾಡಲು ಪತ್ರಕ್ಕಿಂತ ಅದ್ಭುತ ಸಾಧನ ಮತ್ತೊಂದಿಲ್ಲ ಅಲ್ವಾ? ಪೆನ್ನು ಕೈಗೆ ತೆಗೆದುಕೊಂಡಿದ್ದೇನೆ ಪೇಪರ್ ಕೂಡ ರೆಡಿಯಿದೆ ಮುಖಪುಟಕ್ಕೆ ಒಂದು ಕಾನ್ಸೆಪ್ಟ್ ಕೂಡ ರೆಡಿ ಮಾಡಿದ್ದೇನೆ ಅಲ್ಲಿ... ಇಲ್ಲಿ... ಒಂದೆರಡು ಚಿತ್ರ ಕೂಡ ಬಿಡಿಸಿದ್ದೇನೆ ಆದರೆ ಏನು ಬರೆಯುವದು ಅಂತ ಗೊತ್ತಾಗುತ್ತಿಲ್ಲ ಮುದ್ದು...

ಸವಿಯಾಗಿ ಬರೆಯಲು ಕವಿಯು ನಾನಲ್ಲ.... ಚಿರವಾಗಿ ಉಳಿಯಲು ಈ ಭೂಮಿ ನನ್ನದಲ್ಲ.... ಏನೆಂದು ಬರೆಯಲಿ ಈ ಹರಿದು ಹೋಗುವ ಹಾಳೆಯಲ್ಲಿ..... ಎಷ್ಟಾದರೂ... ಮಾತು ಬಾರದ ಮೌನಿ ನಾನಲ್ವ...? ನೀವು ಇದನ್ನು ಒಪ್ಪಿಕೊಳ್ಳುವದಿಲ್ಲ ಬಿಡಿ ನಿಜವಾಗಲೂ ತುಂಬಾ ಮೌನಿ ಕಂಣ್ಡ್ರಿ ನಾನು... ಸರಿ ಬಿಡಿ ಇಷ್ಟೆಲ್ಲಾ ಪ್ರಿಪರೇಷನ್ ಮಾಡಿಕೊಂಡಿದ್ದೇನೆ ಅಂದ ಮೇಲೆ ಬರೆಯಲೇ ಬೇಕಲ್ವಾ ಎಲ್ಲಿಂದ ಶುರು ಮಾಡಲಿ... ನಾನು ಹುಟ್ಟಿದಾಗಿನಿಂದ ಶುರು ಮಾಡೋದು ಅಂದ್ರೆ ನಿಮಗೆ ಓದುವ ಪೇಷೆನ್ಸ್ ಬೇಕಲ್ವಾ? ಮೊದಲೇ ನಿಮಗೆ ಓದೋದು ಅಂದ್ರೆ ಅಲರ್ಜಿ!!! ಜನ್ಮ ಪೂರ್ತಿ ನನ್ನ ಬಯೋಡಾಟ ಓದುವ ಕರ್ಮ ನಿಮಗ್ಯಾಕೆ ಅಲ್ವಾ...?

ಪೀಠಿಕೆನೆ ಸ್ವಲ್ಪ ಜಾಸ್ತಿ ಆಯ್ತು ಡೈರೆಕ್ಟ್ ಆಗಿ ಮ್ಯಾಟರ್‍ಗೆ ಬಂದು ಬಿಡ್ತಿನಿ ಮುದ್ದು..., “ನೂರಾರು ನಿರೀಕ್ಷೆಗಳು ಸಾವಿರಾರು ಸಮೀಕ್ಷೆಗಳು ಅದಕ್ಕೂ ಮೀರಿದ ಪರೀಕ್ಷೆಗಳು ಇದೇ ಜೀವನ. ಇಂತಹ ಜೀವನಕ್ಕೆ