ಸುಂಟಿಕೊಪ್ಪ, ಫೆ. 12: ಕುಶಾಲನಗರವನ್ನು ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಕಾವೇರಿ ತಾಲೂಕು ರಚಿಸಬೇಕೆಂದು ಆಗ್ರಹಿಸಿ ಕಾವೇರಿ ತಾಲೂಕು ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆ ಗಳು ಕನ್ನಡ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಹಕ್ಕೋತ್ತಾಯ ಮಂಡಿಸಿದರು.
ಕಾವೇರಿ ತಾಲೂಕು ಹೋರಾಟ ಕೇಂದ್ರ ಸಮಿತಿ ಸದಸ್ಯರು ಹಾಗೂ ಸುಂಟಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಸ್ಥಾನೀಯ ಸಮಿತಿ ಅಧ್ಯಕ್ಷ ಡಿ. ನರಸಿಂಹ ಮಾತನಾಡಿ, ಮುಖ್ಯ ಮಂತ್ರಿಯವರು ಬಜೆಟ್ನಲ್ಲಿ ನೂತನ ಕಾವೇರಿ ತಾಲೂಕಿಗೆ ಹಸಿರು ನಿಶಾನೆ ನೀಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಕಾವೇರಿ ತಾಲೂಕು ರಚನೆಗಾಗಿ ಆಗ್ರಹಿಸಿ ಅಂಗಡಿ ಮುಂಗ್ಗಟ್ಟು ಮುಚ್ಚಿಸಿ ವಾಹನಗಳನ್ನು ತಡೆದು ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗು ವದು. ಎಂದು ಆಕ್ರೋಶ ವ್ಯಕ್ತಪಡಿಸಿ ದರು.
ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ಖಾನ್ ಮಾತನಾಡಿ ಕಾವೇರಿ ತಾಲೂಕು ರಚನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಪ್ರಯತ್ನ ಮಾಡಲಿಲ್ಲ. ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಆದ್ದರಿಂದ ಹೋರಾಟದ ಮೂಲಕವೇ ಕಾವೇರಿ ತಾಲೂಕು ಪಡೆಯುತ್ತೇವೆ ಎಂದರು. ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಮಾತನಾಡಿ, ಇಲ್ಲಿನ ನಿವಾಸಿಗಳು ತಾಲೂಕು ಕೇಂದ್ರದ ಕೆಲಸ ಕಾರ್ಯಗಳಿಗೆ ಸೋಮವಾರ ಪೇಟೆಗೆ ತೆರಳಬೇಕಾಗಿದ್ದು ಕುಶಾಲ ನಗರವನ್ನು ಕಾವೇರಿ ತಾಲೂಕು ಕೇಂದ್ರವಾಗಿ ಮಾಡುವದರಿಂದ ಈ ಭಾಗದ ಸಾರ್ವಜನಿಕರಿಗೆ ಅನೂಲಕವಾಗಲಿದೆ ಎಂದರು. ಕಾವೇರಿ ತಾಲೂಕು ಹೊರಾಟ ಸಮಿತಿ ಅಧ್ಯಕ್ಷ ಪಿ. ಎಫ್. ಸಬಾಸ್ಟೀನ್ ಮಾತನಾಡಿ, ಕಾವೇರಿ ತಾಲೂಕು ರಚಿಸುವಂತೆ ದಶಕಗಳಿಂದ ಹೋರಾಟ ನಡೆಸುತ್ತಾ ಬರಲಾಗುತ್ತಿದ್ದರೂ ಸರಕಾರ ಪರಿಗಣಿಸದೆ ಕಡೆಗಣಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ವಿಎಸ್ಎಸ್ಎನ್ ಬ್ಯಾಂಕ್ ನಿರ್ದೇಶಕಿ ಲೀಲಾ ಮೇದಪ್ಪ, ಕಾವೇರಿ ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಪಿ.ಆರ್. ಸುನಿಲ್ಕುಮಾರ್, ನಾಗೇಶ್ ಪೂಜಾರಿ, ರಜಾಕ್ (ಉಂಡೆ), ಕೇಂದ್ರ ಸಮಿತಿ ಸದಸ್ಯ ಶಬೀರ್, ಆಟೋ ಚಾಲಕ ಸಂಘದ ಅಧ್ಯಕ್ಷ ಬಿ.ಕೆ. ಪ್ರಶಾಂತ್ (ಕೊಕಾ) ಗ್ರಾ.ಪಂ. ಸದಸ್ಯ ಕೆ.ಇ. ಕರೀಂ, ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಹೆಚ್.ಯು. ರಫೀಕ್, ಎಸ್ಡಿಪಿಐ ಲತೀಫ್, ಇಬ್ರಾಹಿಂ ಮತ್ತಿತರರು ಇದ್ದರು.