ಸೋಮವಾರಪೇಟೆ: ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯಿಂದ ಮೈಸೂರಿನ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿದ್ದ 8ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಯಲ್ಲಿ ಸೋಮವಾರಪೇಟೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಾಲೆಯ ಎಂ.ಎಂ. ದಿಲೀಪ್, ಎಂ.ಕೆ. ರಕ್ಷಕ್, ಕೆ.ಎಲ್. ಕೀರ್ತನ್, ಹೆಚ್.ವಿ. ಸೃಜನ್, ಡಿ.ಎಂ. ಮನಸ್ಸಿನ್, ವೈ.ಎನ್. ಗೌತಮ್, ಎ. ಅಶ್ವಿನ್ ತನುಷ್, ವಿನಾಯಕ್ ಹೆಗ್ಡೆ, ಬಿ.ವೈ. ಸೃಜನ್, ಎಂ.ಆರ್. ಭೂಷಣ್, ಡಿ.ಎಂ. ಹೊಯ್ಸಳ ಅವರುಗಳು ವಿವಿಧ ವಿಭಾಗಗಳಲ್ಲಿ 5 ಚಿನ್ನ, 6 ಬೆಳ್ಳಿ, 11 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ತರಬೇತುದಾರರಾಗಿ ಎನ್.ಎಸ್. ಅರುಣ್ ಕಾರ್ಯನಿರ್ವಹಿಸಿದರು.ಕುಶಾಲನಗರ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯ ವತಿಯಿಂದ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ 8ನೇ ಇಂಟರ್ ಡೊಜೊ ಕರಾಟೆ ಮತ್ತು ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕುಶಾಲನಗರದ ಡ್ರೀಂ ಡ್ಯಾನ್ಸ್ ಗ್ರೂಪ್ ತಂಡ ಹಲವು ಪ್ರಶಸ್ತಿಗಳನ್ನು ಗಳಿಸಿದೆ. ಸಂಸ್ಥೆಯ ವಿದ್ಯಾರ್ಥಿಗಳಾದ ಹೆಚ್.ಜೆ. ಸಂಕೇತ್ ಅವರ ಮಾರ್ಗದರ್ಶನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಾದ ಧೃತು, ಕವಿನ್, ದಿಗಂತ್, ಮುಕುಂದ್, ಮುಗಿಲ್ ವರ್ಣನ್, ಸುಹಾಸ್ತ, ಅಂಕಿತ ಅವರುಗಳು ವಿವಿಧ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ಸಂಸ್ಥೆಯ ಮುಖ್ಯಸ್ಥೆ ಲಾವಣ್ಯ, ನವೀನ್ ಅವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.ನಾಪೆÇೀಕ್ಲು: ಮೈಸೂರಿನಲ್ಲಿ ನಡೆದ 26ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ನಾಪೆÇೀಕ್ಲು ಸೇಕ್ರೆಡ್ ಹಾಟ್ರ್ಸ್ ಶಾಲೆಯ ದಿಲನ್ ತಿಮ್ಮಯ್ಯ ಸಿ.ಎಂ, ಧೀರಜ್ ಕಾರ್ಯಪ್ಪ ಸಿ.ಎಂ., ಅಂಕುರ್ ಪಬ್ಲಿಕ್ ಶಾಲೆಯ ಟಿ.ಕೆ. ಚಿನ್ಮಯ್, ಹಂಸಿನಿ, ದೇವಾನಂದ್, ಸಿಂತ್ಯ ಎಂ.ಜಿ., ಕೀರುಗುಂದದ ಪವನ್ ಕಟಾ ಮತ್ತು ಕುಮಿಟೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಇವರುಗಳು ರಾಷ್ಟ್ರಮಟ್ಟದ ರೆಫ್ರಿ ಸೆನ್ಸಾಯ್ ನಾಗೇಂದ್ರಪ್ಪ ಅವರ ಶಿಷ್ಯರಾಗಿದ್ದಾರೆ.