ಗೋಣಿಕೊಪ್ಪ ವರದಿ, ಫೆ. 10: ಆಂಧ್ರ ಪ್ರದೇಶದ ಗುಂಟೂರುವಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ನ 5 ನೇ ದಿನದ ಕ್ರೀಡಾಕೂಟದಲ್ಲಿ ಕೊಡಗು ತಂಡಕ್ಕೆ ಮತ್ತೆ 3 ಪದಕ ದಕ್ಕಿವೆ.
55 ವಯೋಮಿತಿಯ ಭಾರದ ಗುಂಡು ಎಸೆತದಲ್ಲಿ ಚೇಮೀರ ಸೀತಮ್ಮ 2 ನೇ ಸ್ಥಾನದ ಮೂಲಕ ಬೆಳ್ಳಿ ಗೆದ್ದರು. 65 ವಯೋಮಿತಿಯ ರಿಲೇಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ ಮುಲ್ಲೇರ ಪೊನ್ನಮ್ಮ ಪೂವಣ್ಣ ಪ್ರಥಮ ಸ್ಥಾನದ ಮೂಲಕ ಚಿನ್ನ ಪಡೆದರು. 35 ವಯೋಮಿತಿಯ ರಿಲೇ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಬೊಪ್ಪಂಡ ಕುಸುಮ ಭೀಮಯ್ಯ ದ್ವಿತೀಯ ಸ್ಥಾನದ ಮೂಲಕ ಬೆಳ್ಳಿ ಗೆದ್ದರು. ಇದರಿಂದಾಗಿ ಇಲ್ಲಿವರೆಗೆ ಕೊಡಗು ತಂಡ 5 ಚಿನ್ನ, 3 ಬೆಳ್ಳಿ, 1 ಕಂಚು ಗೆದ್ದಂತಾಗಿದೆ. - ಸುದ್ದಿಪುತ್ರ