ಗೋಣಿಕೊಪ್ಪಲು, ಫೆ. 10: ಇತ್ತೀಚೆಗೆ ಕಾವೇರಿ ಕಾಲೇಜು, ಗೋಣಿಕೊಪ್ಪಲಿನಲ್ಲಿ ಜಿಲ್ಲಾಮಟ್ಟದ ಅಂತರ ಕಾಲೇಜು ಬೋಧಕ-ಬೋಧಕೇತರ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.

ಕಾವೇರಿ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ಸಹಯೋಗದಲ್ಲಿ ನಡೆದ ಕ್ರೀಡಾಕೂಟದಲ್ಲಿ ಶೆಟಲ್ ಬ್ಯಾಂಡ್ಮಿಂಟನ್ ಪಂದ್ಯದಲ್ಲಿ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಹಾಗೂ ಬೋಧಕೇತರ ಸಿಬ್ಬಂದಿ ದಿನು ಅವರು ಏಕಲವ್ಯ ವಸತಿ ಪದವಿಪೂರ್ವ ಕಾಲೇಜಿನ ಮತ್ತು ಕಾಪ್ಸ್-ಬಿ ತಂಡಗಳನ್ನು ಪರಾಜಯಗೊಳಿಸಿ ಪೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟರು. ಪೈಪೋಟಿಯಿಂದ ಕೂಡಿದ ಪೈನಲ್ ಪಂದ್ಯದಲ್ಲಿ ಇವರು ಕಾಪ್ಸ್ ಕಾಲೇಜಿನ ಭೀಮಯ್ಯ ಹಾಗೂ ಚರಮಣ ಅವರ ವಿರುದ್ಧ 27-30 ಪಾಯಿಂಟ್‍ಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಕುತೂಹಲದಿಂದ ಕೂಡಿದ ಫೈನಲ್ ಪಂದ್ಯ ವೀಕ್ಷಣೆಗೆ ವಿವಿಧ ಕಾಲೇಜಿನ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.