ಸುಂಟಿಕೊಪ್ಪ, ಫೆ. 6: ಕೊಡಗು ಜಿಲ್ಲಾ ದಂತ ವೈದ್ಯರ ಸಂಘದ ವತಿಯಿಂದ ಕಳೆದ ಆಗಸ್ಟ್ ತಿಂಗಳಿನಿಂದ ಮಹಾಮಳೆಯಿಂದ ಮನೆ ಕಳಕೊಂಡ 12 ಮಂದಿ ನಿರಾಶ್ರಿತರಿಗೆ ತಲಾ ರೂ 10,000 ಪರಿಹಾರವನ್ನು ಮಡಿಕೇರಿ ವಿದ್ಯಾಭವನದ ಸಭಾಂಗಣದಲ್ಲಿ ತಾ.11 ರಂದು 10.30 ಗಂಟೆಗೆ ನೀಡಲಾಗುವದೆಂದು ಮಾಜಿ ಅಧ್ಯಕ್ಷ ಡಾ. ಶಶಿಕಾಂತ ರೈ ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ದಂತ ವೈದ್ಯರ ಸಂಘದ ಅಧ್ಯಕ್ಷ ಡಾ. ಪೊನ್ನಪ್ಪ, ವಿದ್ಯಾಭವನದ ಪ್ರಾಂಶುಪಾಲರು, ಆಡಳಿತ ಮಂಡಳಿ ಸದಸ್ಯರುಗಳು ಹಾಜರಾಗಲಿದ್ದಾರೆ. ಒಟ್ಟು ರೂ 1 ಲಕ್ಷದ 20 ಸಾವಿರ 12 ಮಂದಿ ನಿರಾಶ್ರಿತರಿಗೆ ಪರಿಹಾರ ನೀಡಲಾಗುವದೆಂದು ಎಂದು ತಿಳಿಸಿದರು.