ಸೋಮವಾರಪೇಟೆ, ಫೆ. 3: ಛತ್ತೀಸ್‍ಗಢದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ನಾಗರಿಕ ಸೇವಾ ಕ್ರೀಡಾಕೂಟದ ಹಾಕಿ ಪಂದ್ಯಾವಳಿಯಲ್ಲಿ ಜಿಲ್ಲೆಯ ನಾಲ್ವರು ದೈಹಿಕ ಶಿಕ್ಷಣ ಶಿಕ್ಷಕರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.

ಬೋಯಿಕೇರಿ ಪ್ರಾಥಮಿಕ ಶಾಲೆಯ ಬಿ.ಟಿ. ಪೂರ್ಣೇಶ್, ಎಸ್.ಎಸ್. ಶಿವಕುಮಾರ್, ಶಿರಂಗಾಲದ ಆರ್.ಡಿ. ಲೋಕೇಶ್, ಆಲೂರು-ಸಿದ್ದಾಪುರ ಶಾಲೆಯ ಮಹೇಶ್‍ಕುಮಾರ್ ಅವರುಗಳು ರಾಜ್ಯ ಹಾಕಿ ತಂಡದೊಂದಿಗೆ ತೆರಳಿದ್ದಾರೆ.

ಜ. 28 ರಿಂದ ತಾ. 4 ರವರೆಗೆ ಕ್ರೀಡಾಕೂಟ ರಾಯಪುರದ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈಗಾಗಲೇ ರಾಜ್ಯ ತಂಡ ಲೀಗ್ ಹಂತದಲ್ಲಿ ಮಹಾರಾಷ್ಟ್ರದೊಂದಿಗೆ 3-2 ರಲ್ಲಿ ಜಯಗಳಿಸಿದ್ದು, ಮಧ್ಯಪ್ರದೇಶದೊಂದಿಗೆ 5-3 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಲೀಗ್‍ನ ಕೊನೆಯ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡದ ವಿರುದ್ಧ ಜಯಗಳಿಸಿದರೆ ನಾಕ್‍ಔಟ್ ಪ್ರವೇಶಿಸಲಿದೆ.