ಚೆಟ್ಟಳ್ಳಿ, ಫೆ. 3: ಸಮೀಪದ ಕಂಡಕೆರೆಯ ಸುನ್ನಿ ಯುವಜನ ಸಂಘದÀ ವತಿಯಿಂದ ಪ್ರತಿ ತಿಂಗಳು ನಡೆದುಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮ ಕಂಡಕೆರೆಯ ಮಹಲ್ ಅಧ್ಯಕ್ಷ ಆಲಿ ಉಸ್ತಾದ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಧ್ವಜಾರೋಹಣ ಮೂಲಕ ಮಹಲ್ ಪ್ರಮುಖ ಹಂಸ ಚಾಲನೆ ನೀಡಿದರು. ಮುಖ್ಯ ಭಾಷಣವನ್ನು ನೌಫಲ್ ಸಖಾಫಿ ಕಳಸ ಮಾಡಿದರು. ಇಲ್ಯಾಸ್ ತಂಙಲ್ ಎರುಮಾಡ್ ಅವರು ದುಆ ನೇತೃತ್ವ ವಹಿಸಿದ್ದರು.
ಜಿಲ್ಲಾ ಸುನ್ನಿ ಜಂಯ್ಯತುಲ್ ಮುಹಲ್ಲಿಮೀನ್ ವತಿಯಿಂದ ಕಂಡಕೆರೆ ಜಮಾಅತ್ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಮಹಲ್ ಕಾರ್ಯದರ್ಶಿ ಗಫೂರ್ ಸಾಹೇಬ್, ಹನೀಫ ಮುಸ್ಲಿಯಾರ್, ಹನೀಫ ಇಮಮಿ, ಮುಸ್ತಫಾ ಸಖಾಫಿ, ಗ್ರಾಮ ಪಂಚಾಯತಿ ಸದಸ್ಯರಾದ ಮೊಹಮ್ಮದ್ ರಫಿ, ಮೊಹಿದ್ದೀನ್ ಮಾಸ್ಟರ್ ಮತ್ತಿತ್ತರರು ಇದ್ದರು.