ಮಡಿಕೇರಿ, ಫೆ. 2 : ಕೊಡಗಿನ ಮಳೆಹಾನಿ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಸರ್ಕಾರ ರಚಿಸಿರುವ ಪ್ರಾಧಿಕಾರದಲ್ಲಿ ಜಿಲ್ಲೆಯ ಪ್ರಮುಖರಿಗೆ ಸ್ಥಾನ ಕಲ್ಪಿಸಬೇಕೆಂದು ಒತ್ತಾಯಿಸಿರುವ ಮಾಜಿ ಸಚಿವ ಯಂ.ಸಿ.ನಾಣಯ್ಯ, ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೂ ಮೊದಲು ಪ್ರಾಧಿಕಾರದ ಕಾರ್ಯವನ್ನು ಪೂರ್ಣಗೊಳಿಸುವದು ಸೂಕ್ತವೆಂದು ಸಲಹೆ ನೀಡಿದ್ದಾರೆ. ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಬಾಳುಗೋಡು ಕೊಡವ ಸಮಾಜದಲ್ಲಿ ಒಟ್ಟು 75 ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡಲಾಯಿತು. ನೆರವು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರ್ಕಾರ ಸಂತ್ರಸ್ತರಿಗಾಗಿ ಸಂಗ್ರಹಿಸಿರುವ ಪರಿಹಾರದ ಹಣವನ್ನು ಪ್ರಾಣ, ಆಸ್ತಿ, ಮನೆ ಕಳೆದುಕೊಂಡ ಕುಟುಂಬಗಳಿಗೆ ಹಾಗೂ ಆಸ್ತಿ ಕಳೆದುಕೊಂಡ ಕುಟುಂಬಗಳಿಗೆ ಎಕರೆಗೆ ತಲಾ ರೂ. 25 ಲಕ್ಷಗಳಂತೆ ನೇರವಾಗಿ ಹಂಚಿಕೆ ಮಾಡಬೇಕೆಂದರು.ಪ್ರಕೃತಿ ವಿಕೋಪದ ಪರಿಹಾರದ ಮೊತ್ತವನ್ನು ರಸ್ತೆ, ಸೇತುವೆ ಅಥವಾ ತಡೆಗೋಡೆಗಳನ್ನು ನಿರ್ಮಿಸಲು ಬಳಸದೆ ಸಂಕಷ್ಟದಲ್ಲಿರುವ ಅರ್ಹ ಸಂತ್ರಸ್ತರಿಗೆ ನೀಡಬೇಕೆಂದು ತಿಳಿಸಿದರು.

(ಮೊದಲ ಪುಟದಿಂದ) ರಾಜ್ಯ ಸರ್ಕಾರ ರಚಿಸಿರುವ ಪ್ರಾಧಿüಕಾರದಲ್ಲಿ ಜಿಲ್ಲೆಯವರನ್ನು ಸೇರಿಸಿಕೊಂಡು ಅವರ ಸಲಹೆಯಂತೆ ಕಾರ್ಯನಿರ್ವಹಿಸುವದು ಸೂಕ್ತ. ಸದÀ್ಯದಲ್ಲಿಯೇ ಲೋಕಸಭೆ ಚುನಾವಣೆ ಘೋಷಣೆಯಾಗಲಿದ್ದು, ನೀತಿ ಸಂಹಿತೆಗೆ ಮುಂಚಿತವಾಗಿ ಎಲ್ಲಾ ಪರಿಹಾರ ಕಾರ್ಯಗಳು ಪೂರ್ಣಗೊಳ್ಳಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷÀ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹಲವು ಕುಟುಂಬಗಳು ಮನೆ, ಆಸ್ತಿ, ಪ್ರಾಣ ಕಳೆದುಕೊಂಡಿವೆ. ಕೊಡವ ಸಮಾಜಗಳ ಒಕ್ಕೂಟ ಮೊದಲ ಹಂತದಲ್ಲಿ 75 ಕುಟುಂಬಗಳನ್ನು ಆಯ್ಕೆ ಮಾಡಿ ಪ್ರತಿ ಕುಟುಂಬಕ್ಕೆ ತಲಾ 25 ಸಾವಿರ ರೂ.ಗಳಂತೆ ನೆರವು ನೀಡಿದೆ ಎಂದರು.

ಉಳಿದ ಕುಟುಂಬಗಳಿಗೆ ಈ ತಿಂಗಳ ಕೊನೆಯ ವಾರದಲ್ಲಿ ಮೈಸೂರು ಕೊಡವ ಸಮಾಜದ ವತಿಯಿಂದ ಮತ್ತು ಮುಂದಿನ ತಿಂಗಳ ಮೊದಲ ವಾರದಲ್ಲಿ ಬೆಂಗಳೂರು ಕೊಡವ ಸಮಾಜದ ವತಿಯಿಂದ ಆರ್ಥಿಕ ನೆರವು ನೀಡಲಾಗುವದೆಂದು ವಿಷ್ಣು ಕಾರ್ಯಪ್ಪ ತಿಳಿಸಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷÀ ಕೆ.ಎಸ್.ದೇವಯ್ಯ, ಒಕ್ಕೂಟದ ಪೋಷಕ ಸದಸ್ಯ ಎಂ.ಸಿ.ನಾಣಯ್ಯ, ಖಜಾಂಚಿ ಚೆರಿಯಪಂಡ ಕಾಶಿಯಪ್ಪ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷÀ ವಾಂಚೀರ ನಾಣಯ್ಯ, ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಅಂಜಪರವಂಡ ನಂಜಪ್ಪ, ಮಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಂಗುಲಂಡ ಬೆಳ್ಯಪ್ಪ, ಗೋಣಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಚಕ್ಕೇರ ಸೋಮಯ್ಯ, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಉಪಸ್ಥಿತರಿದ್ದರು.

ಸಭೆಯಲ್ಲಿ ಒಟ್ಟು 75 ಸಂತ್ರಸ್ತ ಕುಟುಂಬಗಳಿಗೆ ತಲಾ 25 ಸಾವಿರ ರೂ.ಗಳಂತೆ 18.75 ಲಕ್ಷ ಮತ್ತು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತ ವಿದ್ಯಾರ್ಥಿಗಳ ವಿದ್ಯಾರ್ಥಿ ಶುಲ್ಕಕ್ಕಾಗಿ ರೂ.4 ಲಕ್ಷವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್. ದೇವಯ್ಯ ಹಾಗೂ ಕಾರ್ಯಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ ಅವರಿಗೆ ಹಸ್ತಾಂತರಿಸಲಾಯಿತು. ಹೀಗೆ ಒಕ್ಕೂಟವು ಇಂದು ನಡೆದ ಕಾರ್ಯಕ್ರಮದಲ್ಲಿ ಒಟ್ಟು 22.75 ಲಕ್ಷ ರೂ.ಗಳ ನೆರವನ್ನು ವಿತರಿಸಿತು.

ಪ್ರಕೃತಿ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ ಸಭೆ ಸಂತಾಪ ಸೂಚಿಸಿತು. ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಪ್ರಾರ್ಥಿಸಿ, ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಾಟೇರಿರ ಶಂಕರಿಪೂವಯ್ಯ ಸ್ವಾಗತಿಸಿ, ವಂದಿಸಿದರು.

ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಚೆರಿಯಪಂಡ ಇಮ್ಮಿ ಉತ್ತಪ್ಪ ಹಾಗೂ ಹಲವು ಸಂಘ, ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಣ ನೀಡಿರುವವರ ವಿವರ : ಬೆಂಗಳೂರಿನ ಫೆಡರೇಷನ್ ಆಫ್ ಕೊಡವ ಸಮಾಜ ರೂ. 2 ಲಕ್ಷ, ಕುಟ್ಟ ಬಾಡಗ ಮಹಿಳೆಯರು 1 ಲಕ್ಷ, ಕುಟ್ಟ ಕೊಡವ ಸಮಾಜ 1 ಲಕ್ಷ, ಬೆಂಗಳೂರಿನ ಮಹಿಳಾ ವಿಭಾಗ 1 ಲಕ್ಷ, ಮಡಿಕೇರಿ ಕೊಡವ ಸಮಾಜ 10 ಲಕ್ಷ, ವೀರಾಜಪೇಟೆ ಕೊಡವ ಸಮಾಜ 2 ಲಕ್ಷ, ಹುಣಸೂರು ಕೊಡವ ಸಮಾಜ 1 ಲಕ್ಷ, ಕುಶಾಲನಗರ ಕೊಡವ ಸಮಾಜ 50 ಸಾವಿರ, ಬಾಳೆಲೆ ಪಲ್‍ಪರೆ ದೇವಾಲಯ 50 ಸಾವಿರ, ಗೋಣಿಕೊಪ್ಪದ ರೀಫೋರ್‍ಮರ್ಸ್ ಕ್ಲಬ್ 25 ಸಾವಿರ, ಮಂಗಳೂರು ಕೊಡವ ಸಮಾಜ 50 ಸಾವಿರ, ನಾಪೋಕ್ಲು ಕೊಡವ ಸಮಾಜ 2 ಲಕ್ಷ, ವೀರಾಜಪೇಟೆ ಸೌತ್ ಕೂರ್ಗ್ ಕ್ಲಬ್ 50 ಸಾವಿರ ರೂ. ನೀಡಿದೆ.