ಸೋಮವಾರಪೇಟೆ, ಫೆ. 2: ತಾಲೂಕು ಬಾಲ ಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖಾ ವತಿಯಿಂದ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಹಾಗೂ ಪ್ರಬಂಧ ಸ್ಪರ್ಧೆ ನಡೆಯಿತು.
ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಮತಿ, ಕಾರ್ಯನಿರ್ವಹಣಾಧಿಕಾರಿ ಪಿ.ಕೆ. ಬಿನಯ್, ಪ್ರಬಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಉಪಸ್ಥಿತರಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ 9 ರಿಂದ 12 ವರ್ಷದವರೆಗಿನ ವಿಭಾಗದಲ್ಲಿ ಓಎಲ್‍ವಿ ಶಾಲೆಯ ಧನ್ಯಶ್ರೀ ಪ್ರಥಮ ಹೆಚ್.ಜಿ. ಪ್ರಜ್ಞಾ ದ್ವಿತೀಯ ಹಾಗೂ ಕೀರ್ತನ ತೃತೀಯ ಸ್ಥಾನ ಪಡೆದರು. 13 ರಿಂದ 16 ವರ್ಷದವರೆಗಿನ ವಿಭಾಗದಲ್ಲಿ ಸಂತ ಜೋಸೆಫರ ಪ್ರೌಢಶಾಲೆಯ ಹೆಚ್. ಚಂದ್ರಿಕ (ಪ್ರ), ಕುವೆಂಪು ಶಾಲೆಯ ವಿದ್ಯಾರ್ಥಿಗಳಾದ ಎಸ್.ಸಿ. ಚಂದನ (ದ್ವಿ) ಹಾಗೂ ಎಂ.ವಿ ವೈಷ್ಣವಿ (ತೃ) ಸ್ಥಾನ ಪಡೆದರು.
ದೇಶಭಕ್ತಿ ಗೀತೆಯಲ್ಲಿ 5 ರಿಂದ 8 ವರ್ಷದವರೆಗಿನ ಸ್ಪರ್ಧೆಯಲ್ಲಿ ಸಾಂದೀಪನಿ ಶಾಲೆಯ ಸಮೀಕ್ಷ ಮತ್ತು ತಂಡ (ಪ್ರ), ಕುವೆಂಪು ಶಾಲೆಯ ದಿನಿತ್ ಮತ್ತು ತಂಡ (ದ್ವಿ) ಹಾಗೂ ಜ್ಞಾನ ವಿಕಾಸ ಶಾಲೆಯ ಡಿ.ಎಸ್. ಸ್ನೇಹಶ್ರೀ ತಂಡ (ತೃ) ಸ್ಥಾನ ಗಳಿಸಿದರು.
9 ರಿಂದ 12 ವರ್ಷದೊಳಗಿನ ವಿಭಾಗದಲ್ಲಿ ಸಾಂದೀಪನಿ ಶಾಲೆಯ ಹಿಮಾನಿ ಮತ್ತು ತಂಡ (ಪ್ರ), ಚೌಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಲಜಾ ಮತ್ತು ತಂಡ (ದ್ವಿ) ಮತ್ತು ಕುವೆಂಪು ಶಾಲೆಯ ಅಫ್ರ ಮತ್ತು ತಂಡ (ತೃ) ಸ್ಥಾನ ಗಳಿಸಿದರು. 13ರಿಂದ 16 ವರ್ಷದ ವಿಭಾಗದಲ್ಲಿ ಸಾಂದೀಪನಿ ಶಾಲೆಯ ಅಮೂಲ್ಯ ಮತ್ತು ತಂಡ (ಪ್ರ), ಕುವೆಂಪು ಶಾಲೆಯ ಜಾನ್ಹವಿ ಮತ್ತು ತಂಡ (ದ್ವಿ) ಮತ್ತು ಜ್ಞಾನ ವಿಕಾಸ ಶಾಲೆಯ ಪಿ.ಬಿ. ಸಂಜನಾ ಮತ್ತು ತಂಡ (ತೃ) ಸ್ಥಾನ ಪಡೆಯಿತು.
ವೈಯುಕ್ತಿಕ ವಿಭಾಗದಲ್ಲಿ ಸೋಮವಾರಪೇಟೆ ಜಿ.ಎಂ.ಪಿ. ಶಾಲೆಯ ಕೆ.ಎಂ. ತನ್ವೀರ್ (ಪ್ರ), ಓಎಲ್‍ವಿ ಶಾಲೆಯ ಆಜ್ಞ (ದ್ವಿ) ಸ್ಥಾನ ಪಡೆದರು.