ಕೂಡಿಗೆ, ಫೆ. 2: ಹುದಗೂರು ಅರಣ್ಯ ಇಲಾಖೆಯ ಉಪಶಾಖೆಯ ವತಿಯಿಂದ ಬೆಂಕಿಯಿಂದ ಕಾಡನ್ನು ರಕ್ಷಿಸುವ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು..

ಸೋಮವಾರಪೇಟೆ ಕೋರ್‍ಕೊಲ್ಲಿಯಿಂದ ಹುದಗೂರಿನವರೆಗಿನ ಮೀಸಲು ಅರಣ್ಯ ಪ್ರದೇಶವಿದ್ದು, ಆಕಸ್ಮಿಕವಾಗಿ ಕಾಡಿಗೆ ಬೆಂಕಿ ಬೀಳದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆಯ ಎರಡು ಇಕ್ಕೆಲಗಳಲ್ಲಿ ಬಿದ್ದಿರುವ ಕಸಗಳನ್ನು ಹಾಗೂ ಒಣೆಎಲೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸುಟ್ಟು ಮುನ್ನೆಚ್ಚರಿಕೆ ವಹಿಸಿದರು. ಅಲ್ಲದೇ ಸೋಮವಾರಪೇಟೆ ಹಾಗೂ ಹಾರಂಗಿ ಪ್ರವಾಸಿ ತಾಣಗಳಿಗೆ ಚಲಿಸುವ ಪ್ರವಾಸಿಗರಿಗೆ ಕಸಗಳನ್ನು ರಸ್ತೆ ಬದಿ ಹಾಕದಂತೆ ತಿಳುವಳಿಕೆ ನೀಡಿದರು.

ಈ ಸಂದರ್ಭ ಹುದಗೂರು ಉಪವಲಯ ಅರಣ್ಯಾಧಿಕಾರಿ ಎಸ್.ಬಿ. ಸತೀಶ್‍ಕುಮಾರ್, ಸಿಬ್ಬಂದಿಗಳಾದ ರಾಜು ಕಿರಣ್ ಹಾಗೂ ಅರಣ್ಯ ವೀಕ್ಷಕರು ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಇದ್ದರು.