ಕೂಡಿಗೆ, ಫೆ. 2: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ ಕಾಮಗಾರಿಗೆ ಚಾಲನೆ ನೀಡಿದರು. ಕಣಿವೆಯ ಮಾಧವ ಅವರ ಮನೆಯಿಂದ ಮಹಾಬಲ ಭಟ್ ಅವರ ಮನೆಯವರೆಗೆ ಕಾಂಕ್ರೀಟ್ ರಸ್ತೆಗೆ 1 ಲಕ್ಷ ರೂ. ವೆಚ್ಚದಲ್ಲಿ ಚಾಲನೆ ನೀಡಲಾಯಿತು. ವೆಂಕಟೇಶ ಮಾತಾನಾಡುತ್ತಾ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳನ್ನು ಗ್ರಾಮಗಳಲ್ಲಿ ಕೈಗೊಂಡರೆ ಗ್ರಾಮದ ಪ್ರಗತಿ ಸಾಧÀ್ಯವಾಗಲಿದೆ. ಅಲ್ಲದೆ ಹೆಚ್ಚಿನ ಅನುದಾನ ಬರುತ್ತದೆ. ಗ್ರಾಮಸ್ಥರು ಉದ್ಯೋಗ ನೋಂದಣಿ ಮಾಡಿ ಕೊಂಡು ಕಾಮಗಾರಿಯನ್ನು ನಡೆಸಲು ಸಹಕಾರಿಯಾಗಬೇಕು ಎಂದರು. ಈ ಸಂದರ್ಭ ಗ್ರಾ.ಪಂ. ಸದಸ್ಯೆ ಮಂಜಳಾ ಶಿವರುದ್ರಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.