ಮಡಿಕೇರಿ, ಫೆ. 2: ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಶಿಫಾರಸ್ಸು ಮಾಡಲ್ಪಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಹಾಗೂ ಅನೈರ್ಮಲ್ಯಕರ ವೃತ್ತಿಗಳಲ್ಲಿ ತೊಡಗಿರುವ ಪೋಷಕರ ಪ್ರತಿಭಾವಂತ ಗಂಡು ಮಕ್ಕಳ ಆರ್ಥಿಕ ಹಿನ್ನೆಲೆ ಪರಿಗಣಿಸಿ 2019-20 ರ ಸಾಲಿಗೆ ಶ್ರೀ ರಾಮಕೃಷ್ಣ ವಿದ್ಯಾಶಾಲೆ, ಮೈಸೂರು ಇಲ್ಲಿಗೆ 8ನೇ ತರಗತಿಗೆ ದಾಖಲಿಸುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಶಾಲೆಗೆ ದಾಖಲಾಗಲು ಇಚ್ಚಿಸುವಂತಹ ಅರ್ಹ ವಿದ್ಯಾರ್ಥಿಗಳು ಸಹಾಯಕ ನಿರ್ದೇಶಕರು ಶ್ರೇಣಿ-2 ರವರೆಗೆ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಈ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಮಾರ್ಚ್ 25 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ, ದೂ. 08274-249476 ನ್ನು ಸಂಪರ್ಕಿಸಬಹುದು ಎಂದು ವೀರಾಜಪೇಟೆ ತಾಲೂಕು ಪೊನ್ನಂಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.