ಮಡಿಕೇರಿ, ಫೆ. 1: ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದಲ್ಲಿ ತಾ. 2 ರಂದು (ಇಂದು) 2019-20ನೇ ಶೈಕ್ಷಣಿಕ ಸಾಲಿಗೆ 9ನೇ ತರಗತಿಯ ಪ್ರವೇಶ ಕೋರಿ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.
ಪ್ರವೇಶ ಪರೀಕ್ಷೆ ಬೆಳಿಗ್ಗೆ 10 ಗಂಟೆಯಿಂದ 12.30 ಗಂಟೆಯವರೆಗೆ ನಡೆಯಲಿದ್ದು, ಪರೀಕ್ಷಾರ್ಥಿಗಳು ನಿಗದಿತ ಸಮಯಕ್ಕೆ ಅರ್ಧ ಗಂಟೆಗೆ ಮುಂಚಿತವಾಗಿ ಅಂದರೆ ಬೆಳಿಗ್ಗೆ 9.30 ಗಂಟೆಗೆ ಪರೀಕ್ಷಾ ಸ್ಥಳವಾದ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದಲ್ಲಿ ಹಾಜರಿರಲು ಕೋರಿದೆ. ಪರೀಕ್ಷೆಗೆ ತಡವಾಗಿ ಬರುವವರಿಗೆ ಯಾವದೇ ಕಾರಣಕ್ಕೂ ಪರೀಕ್ಷೆ ಬರೆಯಲು ಅವಕಾಶ ಇರುವದಿಲ್ಲ. ಪ್ರವೇಶ ಬಯಸಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ನವೋದಯ ವಿದ್ಯಾಲಯ ಅಧಿಕೃತ ಜಾಲತಾಣ ತಿತಿತಿ.ಟಿಚಿvoಜಚಿಥಿಚಿ.gov.iಟಿ ದಿಂದ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳುವಂತೆ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಿ.ಎಂ. ಐಸಾಕ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ. 9448790386, 9731823457, 9844288616 ಮತ್ತು 9482557322 ನ್ನು ಸಂಪರ್ಕಿಸಬಹುದು ಎಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.