ಕೂಗೆಕೋಡಿ: ಸೋಮವಾರಪೇಟೆ ಸಮೀಪದ ಕೂಗೆಕೋಡಿ ಗ್ರಾಮದ ಬಸವೇಶ್ವರ ದೇವಾಲಯ ಸಮಿತಿಯಿಂದ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷ ಶಿವಶಂಕರ್, ಸದಸ್ಯರಾದ ಧರ್ಮಪ್ಪ, ನಿವೃತ್ತ ಮೇಜರ್ ಮಂದಣ್ಣ, ಶಡಕ್ಷರಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ, ಸದಸ್ಯ ಶಿವನಂಜಪ್ಪ, ಗ್ರಾಮಸ್ಥರು ಹಾಗೂ ಊರಿನವರು ಹಾಜರಿದ್ದರು.ಸೋಮವಾರಪೇಟೆ: ನಡೆದಾಡುವ ದೇವರೆಂದೇ ಕರೆಯಲ್ಪಡುತ್ತಿದ್ದ ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಸಂಸ್ಮರಣೆ ಕಾರ್ಯಕ್ರಮ ಪಟ್ಟಣದ ಬಸವೇಶ್ವರ ರಸ್ತೆಯ ಎ.ಪಿ. ಶಂಕರಪ್ಪ ಅವರ ಮನೆಯಲ್ಲಿ ನಡೆಯಿತು.

ಸ್ವಾಮೀಜಿಗಳ ಅನುಯಾಯಿಯಾಗಿರುವ ಶಂಕರಪ್ಪ ಅವರು ತಮ್ಮ ಮನೆಯ ಮುಂಭಾಗದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ನೂರಾರು ಮಂದಿ ಸಾರ್ವಜನಿಕರಿಗೆ ಅನ್ನ ದಾಸೋಹ ವ್ಯವಸ್ಥೆಗೊಳಿಸಿ, ಸಿದ್ಧಗಂಗಾಶ್ರೀಗಳ ಕಾಯಕವನ್ನು ಸ್ಮರಿಸಿದರು. ಈ ಸಂದರ್ಭ ಶಾರದ ಶಂಕರಪ್ಪ, ಎ.ಎಸ್. ಮಹೇಶ್, ಎ.ಎಸ್. ಮಲ್ಲೇಶ್, ಎ.ಪಿ. ಶಿವರುದ್ರಪ್ಪ, ಮೋಹನ್‍ಮೂರ್ತಿ ಶಾಸ್ತ್ರೀ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕುಶಾಲನಗರ: ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಕುಶಾಲನಗರದ ವೀರಶೈವ ಸಮಾಜ ಮತ್ತು ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ದಾಸೋಹ ಕಾರ್ಯಕ್ರಮ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಘ-ಸಂಸ್ಥೆಗಳ ಪ್ರಮುಖರು ಸ್ವಾಮೀಜಿಯ ಕುರಿತು ಮಾತನಾಡಿದರು. ಪಾಲ್ಗೊಂಡಿದ್ದ ಮಹಿಳಾ ಭಕ್ತರಿಂದ ಕೀರ್ತನೆ, ಭಜನೆ ಕಾರ್ಯಕ್ರಮ ನಡೆಯಿತು. ನಂತರ ನೆರೆದಿದ್ದ ನೂರಾರು ಮಂದಿ ಸಾರ್ವಜನಿಕರಿಗೆ ದಾಸೋಹ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ವೀರಶೈವ ಸಮಾಜದ ಪ್ರಮುಖರಾದ ಹೆಚ್.ಎಂ. ಮಧುಸೂದನ್, ಪಿ. ಮಹದೇವಪ್ಪ, ಹೆಚ್.ವಿ. ಶಿವಪ್ಪ, ಲೋಕೇಶ್, ಶಾಂಂಭವಮೂರ್ತಿ, ಪರಮೇಶ್, ಸುರೇಶ್, ವಿರೂಪಾಕ್ಷ, ಶಿವಲಿಂಗ, ಉದಯಕುಮಾರ್, ಜಿ.ಪಂ. ಮಾಜಿ ಸದಸ್ಯೆ ವಿ.ಪಿ. ಶಶಿಧರ್, ಸಂಘ-ಸಂಸ್ಥೆಗಳ ಪ್ರಮುಖರಾದ ಜಿ.ಎಲ್. ನಾಗರಾಜ್, ಎಂ.ಕೆ. ದಿನೇಶ್, ಎಂ.ಡಿ. ಕೃಷ್ಣಪ್ಪ, ನಿಡ್ಯಮಲೆ ದಿನೇಶ್ ಮತ್ತಿತರರು ಇದ್ದರು.ಸುಂಟಿಕೊಪ್ಪ: ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯನ್ನು ಸುಂಟಿಕೊಪ್ಪದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಜಿ.ಜಿ. ಹೇಮಂತಕುಮಾರ್ ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು.

ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ಹೂವಿನ ಹಾರಗಳಿಂದ ಶೃಂಗರಿಸಿ ಗಂಧದಕಡ್ಡಿ ಹಚ್ಚಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಗೈದು ಸಾರ್ವಜನಿಕರು ಗೌರವರ್ಪಣೆ ಸಲ್ಲಿಸಿದರು.

ಹಿರಿಯ ನಾಗರಿಕ ಎಂ.ಎ. ವಸಂತ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ ಶಿವೈಕ್ಯರಾದ ಸ್ವಾಮೀಜಿಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ, ಗ್ರಾ.ಪಂ. ಸದಸ್ಯರುಗಳಾದ ಎ. ಶ್ರೀಧರ್, ಚಂದ್ರ, ರಜಾಕ್, ಕೆ.ಇ. ಕರೀಂ, ನಾಗರತ್ನ, ರಹೆನಾ ಫೈರೋಜ್ ಹರದೂರು ಪಂಚಾಯಿತಿ ಸದಸ್ಯ ಸುಬ್ಬಯ್ಯ, ತಲೆಹೊರೆ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಎಂ.ಎಸ್. ರವಿ, ಬಿ.ಎಸ್. ಅಶೋಕ್ ಶೇಟ್, ರಕ್ಷಣಾ ವೇದಿಕೆಯ ಕಾರ್ಯದರ್ಶಿ ಅಶೋಕ್, ಸಂತೋಷ್ (ದೀನು), ರಫೀಕ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು. ಇದೇ ಸಂದರ್ಭ ಲಘು ಉಪಹಾರವನ್ನು ವಿತರಿಸಲಾಯಿತು.ಗುಡ್ಡೆಹೊಸೂರು: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಅರ್ಚಕರಿಂದ ಸ್ವಾಮಿಗಳ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ಗ್ರಾಮದ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಸಲಾಯಿತು. ಗ್ರಾಮಸ್ಥರಾದ ಬಿ.ಸಿ. ಮಲ್ಲಿಕಾರ್ಜುನ, ಶುಭಶೇಖರ್, ಬಿ.ಎಸ್. ದಿನೇಶ್, ಬಿ.ಎಸ್. ಗುರುಸ್ವಾಮಿ, ಪಾಪಣ್ಣ, ಗಿರೀಶ್, ಮಂಡೆಪಂಡ ಸೋಮಯ್ಯ (ರಘು), ಕಡ್ಯದ ಬಾಲಕೃಷ್ಣ, ಭರತ್, ಲಿಂಗರಾಜ್, ಬಿ.ಜಿ. ಸುರೇಶ್ ಮುಂತಾದವರು ಹಾಜರಿದ್ದರು.