ಮಡಿಕೇರಿ, ಫೆ. 1: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ನಿರ್ದೇಶನಾಲಯ ಇಲ್ಲಿಯ ನಿರ್ದೇಶಕರ ಹುದ್ದೆಗೆ (ವೇತನ ಶ್ರೇಣಿ ರೂ. 82,000-1,17,700) ರಲ್ಲಿ ನಿವೃತ್ತ, ಬಿಡುಗಡೆ ಹೊಂದಿದ ಆರ್ಮಿ, ನೇವಿ ಮತ್ತು ಏರ್‍ಪೋರ್ಸ್ ಸೇನಾಧಿಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ನಿವೃತ್ತಿ ಹೊಂದಿದ ಬ್ರಿಗೇಡಿಯರ್, ಕರ್ನಲ್ ರ್ಯಾಂಕ್‍ಗೆ ಅಥವಾ ಸರಿಸಮಾನವಾದ ರ್ಯಾಂಕ್ ಹೊಂದಿರುವ ಭಾರತೀಯ ನೌಕಾಸೇನೆ, ಭಾರತೀಯ ವಾಯು ಸೇನೆಯಿಂದ ನಿವೃತ್ತಿ ಹೊಂದಿದ ಸೇನಾಧಿಕಾರಿ ಆಗಿರಬೇಕು. 58 ವರ್ಷಗಳನ್ನು ಮೀರಿರಬಾರದು. ಅರ್ಹ ಅಭ್ಯರ್ಥಿಗಳು ಬಿಳಿ ಹಾಳೆ ಮೇಲೆ ಪೂರ್ಣ ವಿವರದೊಂದಿಗೆ ಒಪ್ಪಿಗೆ ಪ್ರಮಾಣ ಪತ್ರ ಹಾಗೂ ಸಾಫ್ಟ್ ಕಾಪಿಯೊಂದಿಗೆ ನಿರ್ದೇಶನಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ. 58, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು-560025 ಈ ವಿಳಾಸಕ್ಕೆ ತಾ. 10 ರೊಳಗೆ ತಲಪುವಂತೆ ಸಲ್ಲಿಸಲು ಕೋರಿದೆ. ಅರ್ಜಿ ಸಲ್ಲಿಸುವ ಲಕೋಟೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರ ಹುದ್ದೆಗಾಗಿ ಅರ್ಜಿ ಎಂದು ನಮೂದಿಸಲು ಕೋರಿದೆ. (ಇ-ಮೇಲ್: (ಜiಡಿಜsತಿಡಿbಟಡಿ@gmಚಿiಟ.ಛಿom) ಸಂಪರ್ಕಿಸಬಹುದು ಎಂದು ಮಡಿಕೇರಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.