ಮಡಿಕೇರಿ, ಜ. 30: ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಾ. ಜ. 22 ರಂದು ಸಾರ್ವಜನಿಕ ರಜೆಯನ್ನು ಘೋಷಿಸಿದ್ದರಿಂದ ಮುಂದೂಡಲ್ಪಟ್ಟಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ 2018-19ನೇ ಸಾಲಿನ ತೃತೀಯ ಸಾಮಾನ್ಯ ಸಭೆಯು ಫೆ.1 ರಂದು ಪೂರ್ವಾಹ್ನ 10.30ಕ್ಕೆ ಮಂಗಳಗಂಗೋತ್ರಿಯ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ.