ಮಡಿಕೇರಿ, ಜ. 30: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೆ.ಬಿ. ಮಹಂತೇಶ್ ಸ್ಮರಣಾರ್ಥ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ 2018 ಪ್ರಶಸ್ತಿಗೆ ಕ್ಲಬ್ ಸದಸ್ಯರಿಂದ ವರದಿ ಆಹ್ವಾನಿಸಲಾಗಿದೆ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

01.01.2018 ರಿಂದ 31.12.2018 ರವರೆಗೆ ಪ್ರಕಟವಾಗಿರುವ/ ಪ್ರಸಾರವಾಗಿರುವ ವರದಿಗಳನ್ನು ಪ್ರಶಸ್ತಿಗೆ ಹಾಕಬಹುದಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯ 3 ನಕಲು ಪ್ರತಿ ಸಲ್ಲಿಸಬೇಕು. ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿರುವ ವರದಿಯನ್ನು ಸಿ.ಡಿ. ಮೂಲಕ ನೀಡಬೇಕು. ಪ್ರಶಸ್ತಿಗೆ ವರದಿ ಸಲ್ಲಿಸಲು ಫೆಬ್ರವರಿ 10 ಕೊನೆ ದಿನವಾಗಿದೆ. ವರದಿಯನ್ನು ವ್ಯವಸ್ಥಾಪಕರು, ಪತ್ರಿಕಾ ಭವನ, ಮಡಿಕೇರಿಗೆ ತಲಪಿಸಬೇಕು.

ವಿಶೇಷ ಮಹಾಸಭೆ

ಕೊಡಗು ಪ್ರೆಸ್ ಕ್ಲಬ್ ಪ್ರಸ್ತುತ 1998/99 ರಲ್ಲಿ ರಚಿತವಾದ ಬೈಲಾದಡಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಸನ್ನಿವೇಶ ಹಾಗೂ ಭವಿಷ್ಯದ ದಿನಗಳನ್ನು ಗಮನದಲ್ಲಿಟ್ಟುಕೊಂಡು ಬೈಲಾ ತಿದ್ದುಪಡಿ ಮಾಡಲು ಜ.25 ರಂದು ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೈಲಾತಿದ್ದುಪಡಿ ಅಂಶಗಳನ್ನು ಪ್ರತಿಯೊಬ್ಬ ಸದಸ್ಯರಿಗೂ ಅಂಚೆ ಮೂಲಕ ಕಳುಹಿಸಲಾಗುತ್ತದೆ. ಬೈಲಾ ತಿದ್ದುಪಡಿ ಕುರಿತು ಚರ್ಚಿಸಲು ಫೆಬ್ರವರಿ 23 ರಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ವಿಶೇಷ ಮಹಾಸಭೆ ಕರೆಯಲಾಗಿದೆ. ಸದಸ್ಯರು ಬೈಲಾದಲ್ಲಿ ಮಾಡಬೇಕಾದ ತಿದ್ದುಪಡಿ, ಸೇರಿಸಬೇಕಾದ ವಿಷಯಗಳನ್ನು ವಿಶೇಷ ಮಹಾಸಭೆಯಲ್ಲಿ ಪ್ರಸ್ತಾಪಿಸಬಹುದಾಗಿದೆ.

ಪ್ರೆಸ್ ಕ್ಲಬ್ ಡೇ

ಕೊಡಗು ಪ್ರೆಸ್ ಕ್ಲಬ್ ವಾರ್ಷಿಕೋತ್ಸವ ಪ್ರೆಸ್ ಕ್ಲಬ್ ಡೇ ಈ ಬಾರಿ ಫೆಬ್ರವರಿ 23 ರಂದು ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪತ್ರಕರ್ತರಿಗೆ ಒಳಾಂಗಣ ಕ್ರೀಡಾ ಸ್ಪರ್ಧೆ, ಸಾಂಸ್ಕøತಿಕ ಸ್ಪರ್ಧೆ, ಗಾಯನ ಸೇರಿದ್ದಂತೆ ಛದ್ಮವೇಷ, ಮನೋರಂಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪತ್ರಕರ್ತರ ತಂಡದಿಂದ ಸಾಂಸ್ಕøತಿಕ ಕಲಾಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಗಾಯನ ಸ್ಪರ್ಧೆ ಜವಾಬ್ದಾರಿಯನ್ನು ಬಿ.ಎಸ್. ಲೋಕೇಶ್‍ಸಾಗರ್, ಎಸ್.ಎ. ಮುರಳೀಧರ್, ಸಾಂಸ್ಕøತಿಕ ಸ್ಪರ್ಧೆ ಜವಾಬ್ದಾರಿಯನ್ನು ಎಂ.ಎ. ಅಜೀಜ್, ಎಸ್.ಎಂ. ಮುಬಾರಕ್, ಕ್ರೀಡಾ ಕೂಟದ ಜವಾಬ್ದಾರಿಯನ್ನು ಕಿಶೋರ್ ರೈ ಕತ್ತಲೆಕಾಡು, ಚೀಯಂಡಿ ತೇಜಸ್ ಪಾಪಯ್ಯ ನಿರ್ವಹಿಸಲಿದ್ದಾರೆ.

ಪ್ರೆಸ್ ಕ್ಲಬ್ ಡೇ ಪ್ರಯುಕ್ತ ಫೆಬ್ರವರಿ 15 ರಂದು ಪತ್ರಿಕಾ ಭವನದಲ್ಲಿ ಕ್ಲಬ್ ಸದಸ್ಯರಿಗೆ ಒಳಾಂಗಣ ಕ್ರೀಡಾಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಚೆಸ್, ಕೇರಂ, ಟೇಬಲ್ ಟೆನ್ನಿಸ್, ಮೈಂಡ್ ಗೇಮ್ ಹಮ್ಮಿಕೊಳ್ಳಲಾಗಿದೆ. ಕೇರಂ ಮತ್ತು ಟೇಬಲ್ ಟೆನ್ನಿಸ್ ಸಿಂಗಲ್ ಮತ್ತು ಡಬಲ್ಸ್ ವಿಭಾಗದಲ್ಲಿ ನಡೆಯಲಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಫೆಬ್ರವರಿ 10 ರೊಳಗೆ ಪತ್ರಿಕಾ ಭವನ ವ್ಯವಸ್ಥಾಪಕರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.