ಮಡಿಕೇರಿ, ಜ.28: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಸರ್ಕಾರಿ ಪ್ರೌಢಶಾಲೆ ಗಾಳಿಬೀಡು ಶಾಲೆಗೆ 2018-19 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತು ವ್ಯಾಸಂಗ ಮಾಡಲು ಯಾವದೇ ರೀತಿಯ ತೊಡಕು ಉಂಟಾಗದಂತೆ ಸಹಕಾರಿಯಾಗಲು ಅಭಿವೃದ್ಧಿ ಸಂಸ್ಥೆ ತುಮಕೂರು ಹಾಗೂ ಶೇಲ್ ಇಂಡಿಯಾ ಹ್ಯಾಬಿಟೇಟ್ ಫಾರ ಹ್ಯುಮಾನಿಟಿ ಇಂಡಿಯಾ ಬೆಂಗಳೂರು ಇವರ ಸಹಯೋಗದೊಂದಿಗೆ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಟಿ.ಎನ್, ಉಪ ಪ್ರಾಂಶುಪಾಲರಾದ ದೇವಮ್ಮ ಬಿ.ಎಂ ಹಾಗೂ ಸರ್ಕಾರಿ ಪ್ರೌಢಶಾಲೆ ಮೂರ್ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಗುರುರಾಜ ಕೆ.ಪಿ ಇವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಒಟ್ಟು 88 ಸೋಲಾರ್ ದೀಪಗಳನ್ನು ವಿತರಿಸಲಾಯಿತು.