ಸುಂಟಿಕೊಪ್ಪ, ಜ. 28: ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ವಿಶೇಷ ವಿಧ್ಯಾರ್ಥಿಗಳು ಮತ್ತು ಸಾಮಾನ್ಯ ವಿಧ್ಯಾರ್ಥಿಗಳ ಸಮನ್ವಯ ಕ್ರೀಡಾಕೂಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಡಿಕೇರಿ ಅರುಣ್ ಸ್ಟೋರ್ ಮಾಲೀಕರಾದ ಅರುಣ ಅವರು ಮಾತನಾಡಿ ವಿಶೇಷ ಮಕ್ಕಳಲ್ಲೂ ಕೂಡ ಉತ್ತಮವಾದ ಪ್ರತಿಭೆ ಇದೆ ಅದನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿರುತ್ತದೆ.
ಈ ಕೀಡಾಕೂಟದಲ್ಲಿ ವಿಶೇಷ ಮಕ್ಕಳನ್ನು ತರಬೇತಿಗೊಳಿಸಿ ಸಾಮಾನ್ಯ ಮಕ್ಕಳ ಜೊತೆಯಲ್ಲಿ ಆಯೋಜಿಸಿದ್ದು ಸಂತೋಷದ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕೂರ್ಗ್ ಫೌಂಡೇಶನ್ ಟ್ರಸ್ಟಿ ಗಂಗಾ ಚಂಗಪ್ಪ, ಸ್ವಸ್ಥ ಸಂಸ್ಥೆಯ ಪೋಷಕರ ಸಂಘದ ಅಧ್ಯಕ್ಷರಾದ ಶಾಂತಿ, ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ಮಡಿಕೇರಿಯ ಶ್ರೀಮತಿ ಅರ್ಚನಾ ಅರುಣ್ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.