ಶನಿವಾರಸಂತೆ, ಜ. 28: ಪಟ್ಟಣದ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ನಿಸರ್ಗಸಿರಿ ಇಕೋ ಕ್ಲಬ್ ವತಿಯಿಂದ ಇಂಧನ ಉಳಿತಾಯ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಮಾನವನ ಬದುಕಿನಲ್ಲಿ ಇಂಧನದ ಅವಶ್ಯಕತೆ, ಆತ ಎಷ್ಟು ಅವಲಂಭಿತ, ಬೆಲೆ ಏರಿಕೆಗೆ ಹಾಗೂ ಮುಗಿದು ಹೋಗುತ್ತಿರಲು ಕಾರಣವೇನು? ಉಳಿಸಲು ಮಾಡಬೇಕಾದ ಕ್ರಮಗಳು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಇಕೋ ಕ್ಲಬ್ ಸಂಚಾಲಕಿ ಸವಿತಾ, ಉಪನ್ಯಾಸಕ ಜಹೀರ್ ಮಹಮ್ಮದ್ ನಿಜಾಮಿ, ಶಿಕ್ಷಕರಾದ ಕೆ.ಎಸ್. ಸಂದೇಶ್, ಅಂಜನಪ್ಪ, ಸುಚಿತ್ರಾ, ಶ್ರೀಕಲಾ ಉಪಸ್ಥಿತರಿದ್ದರು.