ಮಡಿಕೇರಿ, ಜ. 28: ಮಡಿಕೇರಿ ಕ್ಲಬ್ ಮಹೀಂದ್ರ ರೆಸಾರ್ಟ್ ವತಿಯಿಂದ ಮುಟ್ಲು ಹಾಗೂ ಹಮ್ಮಿಯಾಲ ಗ್ರಾಮಸ್ಥರಿಗಾಗಿ ಜೇನು ಸಾಕಾಣಿಕ ಕೃಷಿ ಮಡಿಕೆಗಳನ್ನು ಸಮಾಜ ಸೇವಾ ಚಟುವಟಿಕೆಯ ಪ್ರಯುಕ್ತ ವಿತರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಅವರು ಗ್ರಾಮದ ಸ್ಥಿತಿಗತಿಗಳನ್ನು ಅವಲೋಕಿಸಿ ಗ್ರಾಮದಲ್ಲಿ ಕೃಷಿ ಜೊತೆಗೆ ಕೃಷಿಯೇತರ ಚಟುವಟಿಕೆಗಳಾದ ಜೇನು, ಹಸು ಸಾಕಾಣಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು. ಕ್ಲಬ್ ಮಹೀಂದ್ರದವರು ಹಮ್ಮಿಕೊಡಿರುವ ಕಾರ್ಯಕ್ರಮವು ಮಾದರಿಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿದರು. ಗಾಳಿಬೀಡು ಅಧ್ಯಕ್ಷ ಸುಭಾಷ್ ಸೋಮಯ್ಯ, ಗ್ರಾ.ಪಂ.ಸದಸ್ಯ ರಮೇಶ್ ಹಾಗೂ ಕ್ಲಬ್ ಮಹೀಂದ್ರ ರೆಸಾರ್ಟ್‍ನ ರೀಜನಲ್ ಹೆಡ್ ವಿಜಯಮೋಹನ್, ರೆಸಾರ್ಟ್ ಮ್ಯಾನೇಜರ್ ಸತ್ಯನ್, ಕುಮಾರ್‍ದಾಸ್, ಮ್ಯಾನೇಜರ್ ಕಾರ್ತಿಕೇಯನ್ ಹಾಗೂ ಸಂಸ್ಥೆಯ ಸಿಬ್ಬಂದಿಯವರು ಹಾಜರಿದ್ದರು.