ಮಡಿಕೇರಿ: ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯಲ್ಲಿ ಜ್ಯೋತಿ ಪ್ರದಾನ ಕಾರ್ಯಕ್ರಮ ಜರುಗಿತು. ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಹೊರಹೋಗುತ್ತಿರುವ ವಿದ್ಯಾರ್ಥಿಗಳ ಮುಂದಿನ ಜೀವನವು ದಿವ್ಯಜ್ಯೋತಿ ಯಾಗಿ ಪ್ರಕಾಶಿಸಲಿ ಎಂದು ಹರಸಿ ತಮ್ಮ ಪೋಷಕರಿಗೆ ಒಪ್ಪಿಸುವ ಕಾರ್ಯಕ್ರಮ ಇದಾಗಿತ್ತು.

ಅತಿಥಿಗಳಾಗಿ ಮೇಜರ್ ಜನರಲ್ ಕೊಡೆಂದೇರ ಅರ್ಜುನ್ ಮುತ್ತಣ್ಣ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ನಟ ಉಳ್ಳಿಯಡ ಭುವನ್ ಪೊನ್ನಣ್ಣ, ಒಲಿಂಪಿಕ್ ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ, ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಮಂದಪಂಡ ಸದಾ ಚಂಗಪ್ಪ, ಕೂರ್ಗ್ ವೆಲ್‍ನೆಸ್ ಫೌಂಡೇಶನ್‍ನ ವರುಣ್, ಮಾಳೆಯಡ ನಾಣಯ್ಯ, ಅಪ್ಪಾರಂಡ ಸಾಗರ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಕೊಳೇರ ಝರುಗಣಪತಿ, ನಿರ್ದೇಶಕ ಅರಮಣಮಾಡ ಸತೀಶ್, ಕೊಳೇರ ಗೌರವ್ ಗಣಪತಿ, ಡಿಇಡಿ ಮತ್ತು ಬಿಇಡಿ ವಿಭಾಗದ ಪ್ರಾಂಶುಪಾಲ ನಾರಾಯಣ್, ಕಾಲೇಜು ವಿಭಾಗದ ಪ್ರಾಂಶುಪಾಲೆ ದಶಮಿ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲೆÀ ಮಧು ತಿಮ್ಮಯ್ಯ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಕಾವೇರಮ್ಮ ಉಪಸ್ಥಿತರಿದ್ದರು.

ಸಾಂಸ್ಕøತಿಕ ಕಾಂiÀರ್iಕ್ರಮವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು ಈ ಸಂಸ್ಥೆಯಿಂದ ವಿದ್ಯಾಭ್ಯಾಸ ಮುಗಿಸಿಕೊಂಡು ಹೊರಹೋಗುತ್ತಿರುವ ಹತ್ತನೇ ತರಗತಿ, ದ್ವಿತೀಯ ಪಿ.ಯು.ಸಿ ಅಂತಿಮ ಪದವಿ, ಡಿ.ಇಡಿ ಹಾಗೂ ಬಿ.ಇಡಿ ವಿದ್ಯಾರ್ಥಿ ಗಳಿಗೆ ಶುಭದ ಸಂಕೇತವಾಗಿರುವ ಉರಿಯುವ ಹಣತೆಯನ್ನು ನೀಡಿ, ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಂತರ್ರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಯನ್ನು ತುಂಬಿಸುವ ಉತ್ತೇಜನಕಾರಿ ಭಾಷಣ ನೆರವೇರಿಸಿಕೊಟ್ಟರು.

ಗೋಣಿಕೊಪ್ಪಲು: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದ ವತಿಯಿಂದ “ಹಾಡಿಯತ್ತ ಎನ್.ಸಿ.ಸಿಕೆಡೆಟ್‍ಗಳ ನಡಿಗೆ” ಎನ್ನುವ ಧ್ಯೇಯ ವಾಕ್ಯದೊಂದಿಗೆ ತಿತಿಮತಿ ಗ್ರಾಮದ ಮರಪಾಲದ ಹಾಡಿಯಲ್ಲಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಅಭಿಯಾನದಲ್ಲಿ ಹಾಡಿಯ ಪ್ರತಿ ಮನೆಗಳಿಗೆ ತೆರಳಿ ಅವರ ಸಮಸ್ಯೆಗಳನ್ನು ಅವಲೋಕಿಸಿ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಸಂವಾದ ಕಾರ್ಯಕ್ರಮದಲ್ಲಿ ಹಾಡಿಯ ಜನರು ಶತಮಾನಗಳಿಂದಲೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ ನೋವು ತೋಡಿಕೊಂಡರು.

ಯಾವದೇ ಪ್ರಯೋಜನವಾಗುತ್ತಿಲ್ಲ. ಶಾಲೆಗಳು ಹಾಡಿಯಿಂದ ದೂರದಲ್ಲಿದ್ದು, ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸಿನ ಸೌಕರ್ಯ ಇರುವದಿಲ್ಲ. ಆಸ್ಪತ್ರೆಗಳು ಸಹ ಇಲ್ಲದಿರುವದು ಹಲವಷ್ಟು ಬಾರಿ ಈ ಹಾಡಿಗಳ ಸಮಸ್ಯೆಗಳ ಬಗ್ಗೆ ನೇರವಾಗಿ ಮಾಹಿತಿ ನೀಡಿದರು ಯಾವದೇ ಪ್ರಯೋಜನವಿಲ್ಲ. ನಮಗೀಗ ಬೇಕಿರುವದು ಇರಲು ಮನೆ, ರಸ್ತೆ ಸೌಲಭ್ಯ, ಆಸ್ಪತ್ರ್ರೆಗಳ, ಶಿಕ್ಷಣ ಸಂಸ್ಥೆಗಳು. ಸರಕಾರ ಇಲ್ಲವೇ ಸಂಬಂಧಪಟ್ಟ ಇಲಾಖೆಗಳು ಇತ್ತ ಕಡೆ ಗಮನಹರಿಸಿ ನಮ್ಮ ಅಭಿವೃದ್ಧಿಯ ಬಗ್ಗೆ ಚಿಂತಿಸಿದರೆ ಒಳಿತಾಗಬಹುದೆಂದರು.

ಸರಕಾರ ಸ್ವ-ಉದ್ಯೋಗ, ಸಾಲ ಯೋಜನೆಗಳು, ಜಾರಿಗೆ ತರುತ್ತಿದ್ದು, ಆ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದ ಕೆಡೆಟ್‍ಗಳು ಸಂಬಂಧಪಟ್ಟ ಇಲಾಖೆಗಳನ್ನು ಭೇಟಿ ಮಾಡಿ ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕೆಂದರು. ಈ ಅಭಿಯಾನದಲ್ಲಿ ಎನ್.ಸಿ.ಸಿ. ಘಟಕದ ನಾಯಕರಾದ ದೀಪಕ್, ಅಭಿಷೇಕ್, ಕೆಡೆಟ್‍ಗಳಾದ ಗಗನ್, ಅಶ್ವಿನ್, ನಿಖೇಶ್ ಮತ್ತು ಎನ್.ಸಿ.ಸಿ.ಅಧಿಕಾರಿ ಅಕ್ರಮ್ ಪಾಲ್ಗೊಂಡಿದ್ದರು.

ನಾಪೋಕ್ಲು: ಇಲ್ಲಿನ ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಇಂಟರ್‍ಆಕ್ಟ್ ಕ್ಲಬ್ ವತಿಯಿಂದ ಮಕರ ಸಂಕ್ರಾಂತಿ ಹಾಗೂ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗಾಳಿಪಟ ಉತ್ಸವವನ್ನು ಏರ್ಪಡಿಸಲಾಗಿತ್ತು.

ಉತ್ಸವದ ಮಹತ್ವವನ್ನು ಸಂಘಟಕಿ ಟಿ.ಆರ್. ಸುಬ್ಬಮ್ಮ ಹಾಗೂ ಕೆ.ಎಂ. ಲೆನ್ ಅಚ್ಚಯ್ಯ ತಿಳಿಸಿದರು. ಪ್ರಾಂಶುಪಾಲೆ ಬಿ.ಎಂ. ಶಾರದ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳು ಶಿಕ್ಷಕ ವೃಂದ ಹಾಗೂ ಚೆರಿಯಪರಂಬು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸುಂಟಿಕೊಪ್ಪ: ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಹಲವಾರು ವ್ಯತ್ಯಾಸವಿದ್ದರೂ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಪೂರಕ ವಾದ ಉಪಕರಣಗಳ ಕೊರತೆಯಿಂದ ಫಲಿತಾಂಶದಲ್ಲಿ ಹಿನ್ನಡೆಯಾಗುತ್ತಿದೆ ಎಂದು ಕೆಎಂಟಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಂ. ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ಕುಶಾಲನಗರ ಕೆಎಂಟಿ ಶಾಲೆಯ ವತಿಯಿಂದ 2 ಗಣಕ ಯಂತ್ರವನ್ನು ವಿತರಿಸಿ ಮಾತನಾಡಿದರು. 8ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳ ‘ಕಲಿಕೆ’ಯಲ್ಲಿ ಗಮನಾರ್ಹ ಬದಲಾವಣೆ ಸಾಧನೆ ಆಗಬೇಕೆಂದು ಅವರು ಹೇಳಿದರು.

ಹಳೆ ವಿದ್ಯಾರ್ಥಿಯಾದ ಸತೀಶ್ ಮಾತನಾಡಿ ಸುಂಟಿಕೊಪ್ಪ ನಾಡು ಪ್ರೌಢಶಾಲೆ ತನ್ನದೆ ಆದ ರೀತಿಯಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿಗಳಾದ ಕೆ.ಎಸ್. ಮಂಜುನಾಥ್ ಮಾತನಾಡಿ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬೇಕಾದ ಗಣಕ ಯಂತ್ರವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ ಕೆಎಂಟಿ ವಿದ್ಯಾಸಂಸ್ಥೆಯ ಸೇವೆಗೆ ಧನ್ಯತೆ ಸಲ್ಲಿಸಿದರು.

ಇದೇ ಸಂದರ್ಭ ಶಾಲೆಗೆ 2 ಗಣಕ ಯಂತ್ರಗಳನ್ನು ಕೆಎಂಟಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪಿ.ಎಂ. ಮೋಹನ್, ಶಾಲೆಯ ಹಳೆ ವಿದ್ಯಾರ್ಥಿಯಾದ ಸತೀಶ್ ರವರು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಬಿ. ಶಂಕರ್, ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಹಾಗೂ ಸದಸ್ಯರು ಮುಖ್ಯ ಶಿಕ್ಷಕಿ, ಸಹ ಶಿಕ್ಷಕರು ವಿದ್ಯಾರ್ಥಿಗಳ ಸಮುಖದಲ್ಲಿ ನೀಡಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಬಿ. ಶಂಕರ್, ಉಪಾಧ್ಯಕ್ಷೆ ಮೀನಾ ಸೋಮಯ್ಯ, ಸದಸ್ಯರುಗಳಾದ ಕುಟ್ಟಪ್ಪ, ಸನ್ನಿ, ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎಸ್. ಇಂದಿರಾ ಹಾಗೂ ಸಹಶಿಕ್ಷಕರು ಇದ್ದರು.

ಸೋಮವಾರಪೇಟೆ: ಸಮೀಪದ ಕಿರಗಂದೂರು ಸರ್ಕಾರಿ ಪ್ರಾಥಮಿಕ ಹಾಗು ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಇ. ಭರತ್, ಕಾರ್ಯದರ್ಶಿ ಪಿ.ಬಿ. ಪೊನ್ನಪ್ಪ, ಬೆಂಗಳೂರು ಮಲ್ನಾಡ್ ಗೆಳೆಯರ ಬಳಗದ ನಿರ್ದೇಶಕ ರಂಜನ್‍ಗೌಡ, ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಜಿ.ಟಿ. ಗಣೇಶ್ ಇದ್ದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪುರುಷರ ವಿಭಾಗದ ವಾಲಿಬಾಲ್ ಪ್ರಶಸ್ತಿಯನ್ನು ತಾಕೇರಿ ಬಿ. ತಂಡ ಪಡೆಯಿತು. ತಾಕೇರಿ ಎ. ದ್ವಿತೀಯ ಸ್ಥಾನವನ್ನು ಗಳಿಸಿತು.

ಮಹಿಳೆಯರ ಥ್ರೋಬಾಲ್‍ನಲ್ಲಿ ತಾಕೇರಿ ಮಲ್ಲಜ್ಜಿರ ಮಹಿಳಾ ತಂಡ (ಪ್ರಥಮ), ಈಶ್ವರಿ ಯುವತಿ ಮಂಡಳಿ (ದ್ವಿತೀಯ), ಮಹಿಳೆಯರ ಹಗ್ಗಜಗ್ಗಾಟದಲ್ಲಿ ತಾಕೇರಿ ಉಮಾಮಹೇಶ್ವರಿ (ಪ್ರಥಮ), ಹೊಸರಕಳ್ಳಿ ಗ್ರೂಪ್ (ದ್ವಿತೀಯ)ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ತಾಕೇರಿ ಗ್ರಾಮ ಪ್ರಥಮ, ಕಿರಗಂದೂರು ತಂಡ ದ್ವಿತೀಯ ಸ್ಥಾನ ಗಳಿಸಿದರು.

ಚೆಂಡು ಎಸೆತ ಸ್ಪರ್ಧೆಯಲ್ಲಿ ಕೆ.ಹೆಚ್. ದಿಲೀಪ್ (ಪ್ರಥಮ), ಬಿ.ಸಿ. ಪ್ರವೀಣ್ (ದ್ವಿತೀಯ), ಬಾಲಕರ ವಿಭಾಗದ 100 ಮೀಟರ್ ಓಟದಲ್ಲಿ ವಿ.ಎಂ. ಕಾರ್ತಿಕ್ (ಪ್ರಥಮ), ವಿಶ್ವಾಸ್ (ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಬಿ.ಡಿ. ವೀಕ್ಷಿ ಪ್ರಥಮ, ಪ್ರೇಕ್ಷತಾ ದ್ವಿತೀಯ ಸ್ಥಾನ ಗಳಿಸಿದರು.

ಕೂಡಿಗೆ: ಕೂಡಿಗೆಯ ಸದ್ಗುರು ಅಪ್ಪಯ್ಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ಸೈಕಲ್ ವಿತರಣೆಯ ಯೋಜನಗೆ ಚಾಲನೆ ನೀಡಲಾಯಿತು. ಕೂಡಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ವಿದ್ಯಾರ್ಥಿಗಳಿಗೆ ಸೈಕಲ್‍ಗಳನ್ನು ಶಾಲಾ ಆವರಣದಲ್ಲಿ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೇಮಲೀಲಾ ವಹಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೀರಿಶಕುಮಾರ, ಸದಸ್ಯರಾದ ರಾಮಚಂದ್ರ, ಪುಪ್ಪ, ಕಲ್ಪನಾ, ಶಾಲಾ ಅಭಿವೃದ್ಧಿ ಸಮಿತಿಯ ಖಜಾಂಚಿ ಜಯಂತ್, ಅಡಳಿತ ಮಂಡಳಿಯ ನಿದೇರ್ಶಕರಾದ ಮಾಣ್ಣಪ್ಪ, ಅಪ್ಪಣ್ಣ, ಶಾಲಾ ಪೋಷಕ ಪರಿಷತ್ತಿನ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಸ್ವಾತಿ, ಶಾಲಾ ಶಿಕ್ಷಕರ ವೃಂದ ಹಾಜರಿದ್ದರು.ಆಲೂರು-ಸಿದ್ದಾಪುರ: ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಹೇಳಿದರು.

ಆಲೂರು-ಸಿದ್ದಾಪುರ ಸರ್ಕಾರಿ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿ, ಸರ್ಕಾರ ಶಾಲಾ ಮಕ್ಕಳಿಗೆ ವಿವಿಧ ಯೋಜನೆಗಳನ್ನು ತರುತ್ತಿದ್ದು, ಇದರಲ್ಲಿ ಒಂದು ಯೋಜನೆ ಮಕ್ಕಳಿಗೆ ಸೈಕಲ್ ವಿತರಣೆ ಯೋಜನೆ. 8ನೇ ತರಗತಿ ವಿದ್ಯಾರ್ಥಿಗಳು ಇಲ್ಲಿಂದ ಸೈಕಲ್ ಮನೆಗೆ ತೆಗೆದುಕೊಂಡು ಹೋದ ನಂತರ ಬಳಕೆ ಮಾಡದೆ ಇರುವದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಈ ರೀತಿಯಾಗಬಾರದು. ಎಲ್ಲಾ ಮಕ್ಕಳು ಸೈಕಲ್‍ಗಳನ್ನು ಶಾಲೆಗೆ ತರುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಲೀಲಾವತಿ, ಶಾಲಾ ಮೂಖ್ಯ ಶಿಕ್ಷಕ ಪರಮೇಶ್ವರಪ್ಪ ಹಾಗೂ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ವಿಜಯ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭರತೇಶ್ ಹಾಗೂ ಸಮಿತಿಯ ಸದಸ್ಯರುಗಳು ಸೇರಿದಂತೆ ಮುಂತಾದವರಿದ್ದರು.

ಮಡಿಕೇರಿ: ಮಹಾರಾಷ್ಟ್ರದ ಪುಣೆಯ ಖರಾಢಿ ಜಿಲ್ಲೆಯ ರಾಜರಾಮ ಆಲೂರು-ಸಿದ್ದಾಪುರ: ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಹೇಳಿದರು.

ಆಲೂರು-ಸಿದ್ದಾಪುರ ಸರ್ಕಾರಿ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿ, ಸರ್ಕಾರ ಶಾಲಾ ಮಕ್ಕಳಿಗೆ ವಿವಿಧ ಯೋಜನೆಗಳನ್ನು ತರುತ್ತಿದ್ದು, ಇದರಲ್ಲಿ ಒಂದು ಯೋಜನೆ ಮಕ್ಕಳಿಗೆ ಸೈಕಲ್ ವಿತರಣೆ ಯೋಜನೆ. 8ನೇ ತರಗತಿ ವಿದ್ಯಾರ್ಥಿಗಳು ಇಲ್ಲಿಂದ ಸೈಕಲ್ ಮನೆಗೆ ತೆಗೆದುಕೊಂಡು ಹೋದ ನಂತರ ಬಳಕೆ ಮಾಡದೆ ಇರುವದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಈ ರೀತಿಯಾಗಬಾರದು. ಎಲ್ಲಾ ಮಕ್ಕಳು ಸೈಕಲ್‍ಗಳನ್ನು ಶಾಲೆಗೆ ತರುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಲೀಲಾವತಿ, ಶಾಲಾ ಮೂಖ್ಯ ಶಿಕ್ಷಕ ಪರಮೇಶ್ವರಪ್ಪ ಹಾಗೂ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ವಿಜಯ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭರತೇಶ್ ಹಾಗೂ ಸಮಿತಿಯ ಸದಸ್ಯರುಗಳು ಸೇರಿದಂತೆ ಮುಂತಾದವರಿದ್ದರು.

ಮಡಿಕೇರಿ: ಮಹಾರಾಷ್ಟ್ರದ ಪುಣೆಯ ಖರಾಢಿ ಜಿಲ್ಲೆಯ ರಾಜರಾಮ ಭಿಕು ಪಾತ್ರೆ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗದ ಟ್ವೆಕ್ವಾಂಡೋ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಮಡಿಕೇರಿಯ ಮರ್ಕರಾ ಟೆಕ್ವಾಂಡೋ ಕ್ಲಬ್‍ನ ವಿದ್ಯಾರ್ಥಿಗಳು ತಲಾ ಕಿರೋಗಿ ಮತ್ತು ಪುಂಸೆ ಎಂಬ ಎರಡು ವಿಭಾಗಗಳÀಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಬ್ ಜೂನಿಯರ್ ವಿಭಾಗದಲ್ಲಿ ಥಾನಿಶ್ ತಿಮ್ಮಯ್ಯ ಚಿನ್ನ ಮತ್ತು ಕಂಚು, ಎಂ.ಜೆ.ವಿಜಯ ಬೆಳ್ಳಿ ಮತ್ತು ಕಂಚು, ಕೆ.ಎನ್. ಚರಣ್ ಕುಮಾರ್ 2 ಕಂಚಿನ ಪದಕ, ಎಂ.ಆರ್. ಮೃದುಲ್ ಚಿನ್ನ ಮತ್ತು ಕಂಚು, ಪಿ.ಜಿ. ನಿಖೇಶ್ 2 ಚಿನ್ನದ ಪದಕ, ಶ್ರೇಯಸ್ ಸೋಮಣ್ಣ ಚಿನ್ನ ಮತ್ತು ಕಂಚು, ಕರಣ್ ದಿವಾಕರ್ ಚಿನ್ನ ಮತ್ತು ಬೆಳ್ಳಿ, ಗ್ಲನ್ ಪ್ರಿನ್ಸ್ 2 ಕಂಚಿನ ಪದಕ, ಸೋನಾಲ್ ಸೀತಮ್ಮ ಬೆಳ್ಳಿ ಮತ್ತು ಕಂಚು, ಫಾತಿಮ ಸುಫೈನಾ 2 ಕಂಚಿನ ಪದಕ, ಎನ್.ಕೆ. ಪ್ರಜ್ಞಾ 2 ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜೂನಿಯರ್ ವಿಭಾಗದಲ್ಲಿ ಎಂ.ಜೆ. ಅಕ್ಷಯ್ 2 ಚಿನ್ನದ ಪದಕ, ಸೋಹನ್ ಸೋಮಣ್ಣ ಬೆಳ್ಳಿ ಮತ್ತು ಕಂಚು, ಚೇತನಾಶ್ರೀ ಚಿನ್ನ ಮತ್ತು ಬೆಳ್ಳಿ, ಶೈನಿ ಬೆಳ್ಳಿ ಮತ್ತು ಕಂಚು, ಲಿಫಿಕಾ ಬೆಳ್ಳಿ ಮತ್ತು ಕಂಚು ಪಡೆದುಕೊಂಡಿದ್ದಾರೆ. ಸೀನಿಯರ್ಸ್ ವಿಭಾಗದಲ್ಲಿ ಶಾಕೀರ್ 2 ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಮರ್ಕರಾ ಟೆಕ್ವಾಂಡೋ ಕ್ಲಬ್‍ನ ಮಾ. ಕುಶಾಲ್ ಕುಮಾರ್ ಅವರಿಂದ ತರಬೇತಿ ಪಡೆದಿರುವ ವಿದ್ಯಾರ್ಥಿಗಳು ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಾಪೆÇೀಕ್ಲು: ನೆಲಜಿ ಪೇರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಧ್ವಜ ಸ್ತಂಭವನ್ನು ಅಪ್ಪುಮಣಿಯಂಡ ಸೋಮಣ್ಣ ಉದ್ಘಾಟಿಸಿದರು. ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಸದಸ್ಯ ಚಂಗೇಟಿರ ಕುಮಾರ್ ಸೋಮಣ್ಣ ನೆರವೇರಿಸಿದರು.

ಧ್ವಜ ಸ್ತಂಭವನ್ನು ಅಪ್ಪುಮಣಿಯಂಡ ಸನ್ನು ಸೋಮಣ್ಣ ಅವರ ತಂದೆ ಮುತ್ತಪ್ಪ ಅವರು 50 ವರ್ಷಗಳ ಹಿಂದೆ ನಿರ್ಮಿಸಿಕೊಟ್ಟಿದ್ದರು. ಶಿಥಿಲಗೊಂಡ ಹಿನ್ನೆಲೆ ಅದನ್ನು ಸನ್ನು ಸೋಮಣ್ಣ ಮರು ನಿರ್ಮಿಸಿ ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹೇಮಾವತಿ, ಮುಖ್ಯ ಶಿಕ್ಷಕ ಪಿ.ಹೆಚ್. ಐಮದೆ, ಪಾಲೇಡ ಅಯ್ಯಪ್ಪ, ಭಜನ್ ಸೋಮಣ್ಣ, ಶಿಕ್ಷಕರಾದ ಯಶಸ್ವಿನಿ, ದಿವ್ಯಾ, ಮೈನಾ, ಮತ್ತಿತರರು ಇದ್ದರು.ಮೂರ್ನಾಡು: ಪ್ರತಿ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ವಿದ್ಯೆ ಅತಿ ಅಮೂಲ್ಯವಾದ ವಸ್ತುವಾಗಿದೆ ಎಂದು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಜೆ.ಎ. ಕುಂಞ ಅಬ್ದುಲ್ಲಾ ಹೇಳಿದರು. ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ನಿಂತ ನೀರಾಗದೆ ಹರಿಯುವ ನೀರಾಗಿದ್ದು, ಪರಿವರ್ತನಾಶೀಲವಾಗಿರುವ ಶಿಕ್ಷಣ ಮನುಷ್ಯನ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿದೆ. ಅದರೆ ಈಗ ಗುಣಮಟ್ಟದ ಶಿಕ್ಷಣ ಎಲ್ಲಿ ದೊರಕುತ್ತಿಲ್ಲ. ಕೇವಲ ಪರೀಕ್ಷೆಗೆ ಪೂರಕವಾದ ಶಿಕ್ಷಣದ ವ್ಯವಸ್ಥೆ ಮಾತ್ರ ಇಂದು ಉಳಿದಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆದು ಅದನ್ನು ಪೋಷಿಸುವ, ಬೆಳೆಸುವ ಕಾರ್ಯವಾಗಬೇಕು. ಈ ಕಾರ್ಯಕ್ಕೆ ಗುರುಗಳ ಸಹಾಯ ಅತ್ಯವಶ್ಯಕವಾದುದು. ಮನುಷ್ಯ ತನ್ನ ಸಾಧನೆಯ ಉತ್ತುಂಗ ಶಿಖರಕ್ಕೆ ಏರಬೇಕಾದರೆ ಅದು ಗುರುವಿನ ತ್ಯಾಗಮಯ ಮತ್ತು ನಿಸ್ವಾರ್ಥತೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳನ್ನು ಓದಬೇಕು. ಮೊಬೈಲ್‍ಗಳ ಮೇಲೆ ತೀವ್ರ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳಬೇಕು. ಈಗಿನ ಪರಿಶ್ರಮದ ಓದು ಮುಂದೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಸಮಾರಂಭದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸರ್ವಸ್ವವನ್ನು ಕಳೆದುಕೊಂಡ ಮೂರು ಕುಟುಂಬಗಳನ್ನು ಆಯ್ಕೆ ಮಾಡಿ, ಶಾಲಾ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿ ಆ ಹಣವನ್ನು ಹೆಬ್ಬಟ್ಟಗೇರಿಯ ಮಿನ್ನಂಡ ಮಿಟ್ಟು ಗಣಪತಿ, ಜೋಡುಪಾಲದ ಶೇಕ್ ಮದಾರ, ಮುಕ್ಕೋಡ್ಲು ಗ್ರಾಮ ತಡಿಯಪ್ಪನ ಕುಶಾಲಪ್ಪ ಅವರ ಕುಟುಂಬಗಳಿಗೆ ತಲಾ 25 ಸಾವಿರ ರೂಗಳನ್ನು ನೀಡ ಲಾಯಿತು. ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮಾಳೇಟಿರ ನವೀನ್ ಕಾರ್ಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಖಜಾಂಚಿ ಬಡುವಂಡ ಬೆಲ್ಲು ಚಿಣ್ಣಪ್ಪ, ನಿರ್ದೇಶಕರಾದ ಅವರೆಮಾದಂಡ ಸುಗುಣ ಸುಬ್ಬಯ್ಯ, ಬಡುವಂಡ ಬೋಪಣ್ಣ, ಬಡುವಂಡ ವಿಜಯ, ಎನ್.ಓ. ಮ್ಯಾಥ್ಯು, ಶಾಲಾ ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ದತ್ತಿ ನಿಧಿ ಬಹುಮಾನಗಳನ್ನು ವಿತರಿಸಲಾಯಿತು. ಕೊನೆಯಲ್ಲಿ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮ ಮನರಂಜಿಸಿತು.