ಮಡಿಕೇರಿ, ಜ.25: ಸ್ವಾಗತ ವಿದಾಯಗಳಿಲ್ಲದ ಮನುಜ ಮಂಟಪ ಹೆಸರಿನಲ್ಲಿ ಕೊಡಗಿನ ಜಲಪ್ರವಾಹ ಹಾಗೂ ಭೂಕುಸಿತದ ಸಂತ್ರಸ್ತರಿಗೆ ನೆರವು ಹಾಗೂ ಸಂವಾದ ಕಾರ್ಯಕ್ರಮವನ್ನು ಪೀಪಲ್ ಫಾರ್ ಪೀಪಲ್ ಸಂಸ್ಥೆಯು ತಾ.29 ರಂದು ಮಡಿಕೇರಿಯಲ್ಲಿ ಆಯೋಜಿಸಿದೆ.
ಮಡಿಕೇರಿಯ ಲೀ ಕೂರ್ಗ್ ಹೊಟೇಲ್ ಸಭಾಂಗಣದಲ್ಲಿ (ರಾಜಾಸೀಟ್ ರಸ್ತೆ) ತಾ. 29 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿತ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕೊಡಗಿಗಾಗಿ ರಂಗಸಪ್ತಾಹ ಕಾರ್ಯಕ್ರಮದಲ್ಲಿ ಸಂಗ್ರಹವಾದ ಧನ ಸಹಾಯವನ್ನು ಪ್ರಕೃತ್ತಿ ವಿಕೋಪದಲ್ಲಿ ಅಶಕ್ತ, ಅಸಹಾಯಕ ನಿರಾಶ್ರಿತರ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಸಂದರ್ಭ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ದನ್ ಹೆಚ್.ಪಿ., ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಲೀ ಕೂರ್ಗ್ ಹೊಟೇಲ್‍ನ ಕಾರ್ಯನಿರ್ವಹಣ ನಿರ್ದೇಶಕ ಎಂ.ಬಿ. ಬಷೀರ್ ಪಾಲ್ಗೊಳ್ಳಲಿದ್ದು, ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಅಧ್ಯಕ್ಷ ಚಕ್ರವರ್ತಿ ಚಂದ್ರಚೂಡ್ ಅಧ್ಯಕ್ಷತೆ ವಹಿಸಲಿದ್ದಾರೆ.
ನಮ್ಮ ಕೊಡಗು ತಂಡದ ಅಧ್ಯಕ್ಷ ನೌಷಾದ್ ಜನ್ನತ್, ಪೀಪಲ್ ಫಾರ್ ಪೀಪಲ್ ಕಾರ್ಯದರ್ಶಿ ಸಂತೋಷ್ ಕೊಡಂಕೇರಿ ಭಾಗವಹಿಸುತ್ತಾರೆ. ಕೊಡಗಿನ ಪ್ರಾಕೃತಿಕ ದುರಂತದ ಕಥೆ ಹೇಳುವ ವಿಭಿನ್ನ ಸಾಕ್ಷ್ಯಚಿತ್ರವಾದ ‘ಜಮ್ಮಾ ಭೂಮಿರ ಕಥೆ’ ಗೆ ಈ ಸಂದರ್ಭ ಚಾಲನೆ ನೀಡಲಾಗುತ್ತದೆ ಎಂದು ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.