ಚೆಟ್ಟಳ್ಳಿ, ಜ. 25: ಇಲ್ಲಿನ ಫ್ರೌಡ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಬಿ.ಎಫ್.ಸಿ. ಕುಂದಾ, ಎಫ್.ಸಿ. ಕಂಡಕರೆ, ನೆಹರು ಎಫ್.ಸಿ. ಪಾಲಿಬೆಟ್ಟ ಸೇರಿದಂತೆ ಆರು ತಂಡಗಳು ಮುನ್ನಡೆ ಸಾಧಿಸಿವೆ. ಮೊದಲನೆ ಪಂದ್ಯಾಟದಲ್ಲಿ ಕುಂದಾ ತಂಡವು ಓಂ ಶಕ್ತಿ ಭೂತನಕಾಡು ತಂಡವನ್ನು 3-1 ಗೋಲುಗಳ ಅಂತರದಿಂದ ಮಣಸಿತು.

ಎರಡನೇ ಪಂದ್ಯವು ಕಂಡಕರೆ ಎಫ್.ಸಿ ಹಾಗೂ ಅಮಿಟಿ ಗದ್ದೆಹಳ್ಳ ತಂಡಗಳ ನಡುವೆ ನಡೆಯಿತು.

ಎಫ್.ಸಿ ಕಂಡಕರೆ ತಂಡವು 3-2 ಗೋಲುಗಳ ಅಂತರದಿಂದ ಅಮಿಟಿ ಗದ್ದೆಹಳ್ಳ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ಮೂರನೇ ಪಂದ್ಯದಲ್ಲಿ ನೆಹರು ಎಫ್.ಸಿ ಪಾಲಿಬೆಟ್ಟ ತಂಡವು 1-0 ಗೋಲುಗಳ ಅಂತರದಿಂದ ನೇತಾಜಿ ಕೊಡಗರಹಳ್ಳಿ ತಂಡವನ್ನು ಮಣಿಸಿತು.

ನಾಲ್ಕನೇ ಪಂದ್ಯವು ಶೈನ್ ಸ್ಟಾರ್ ಕೇರಳ ಹಾಗೂ ಯುನೈಟೆಡ್ ಸುಂಟಿಕೊಪ್ಪ ತಂಡಗಳ ನಡುವೆ ನಡೆಯಿತು.

ಶೈನ್ ಸ್ಟಾರ್ ತಂಡವನ್ನು ಯುನೈಟೆಡ್ ಸುಂಟಿಕೊಪ್ಪ ತಂಡವು 1-0 ಗೋಲುಗಳ ಅಂತರದಿಂದ ಸೋಲಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟರು.

5ನೇ ಪಂದ್ಯವು ಸಿ.ಸಿ.ಎಫ್.ಸಿ ಕಾಫಿಬೋರ್ಡ್ ಹಾಗೂ ಕಂಡಕರೆ ಎಫ್.ಸಿ ಬಿ ತಂಡಗಳ ನಡುವೆ ನಡೆಯಿತು.

ಸಿ.ಸಿ.ಎಫ್.ಸಿ ತಂಡವು 4-0 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.