ಮಡಿಕೇರಿ, ಜ. 25: 7ನೇ ಹೊಸಕೋಟೆಯ ಸಂತ ಸಬಾಸ್ಟಿನ್ ದೇವಾಲಯದ ವಾರ್ಷಿಕ ಹಬ್ಬ ತಾ. 26 ರಂದು (ಇಂದು) ಮತ್ತು ತಾ. 27 ರಂದು ನಡೆಯಲಿದೆ.

ಉತ್ಸವದ ಅಂಗವಾಗಿ ತಾ. 26 ರಂದು ಅಪರಾಹ್ನ 4.15ಕ್ಕೆ ಧ್ವಜಾರೋಹಣ, 4.30ಕ್ಕೆ ವಿಧಾನ ಪೂರ್ವಕ ದಿವ್ಯ ಬಲಿಪೂಜೆ ನಡೆಯಲಿದೆ. ಸಿದ್ದಾಪುರದ ಸೈಂಟ್ ಮೇರೀಸ್ ಚರ್ಚ್‍ನ ಫಾದರ್ ಮಾಣಿವೆಳು ತೇಡತ್ರ್ ಪರಂಬಿಲ್, ಪುತ್ತೂರು ಸಾನ್‍ತೋಮ್ ಗುರು ಮಂದಿರದ ಫಾದರ್ ಸನ್ನಿ ಆಲಪಾಟ್ ಪಾಲ್ಗೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ನಡೆಯಲಿರುವ ಮೃತರ ಸಮಾಧಿ ಸಂದರ್ಶನ ಹಾಗೂ ಪ್ರಾರ್ಥನೆ ಹೊಸಕೋಟೆ ಸಬಾಸ್ಟಿನ್ ದೇವಾಲಯದ ಫಾದರ್ ಸೆಬಾಸ್ಟಿನ್ ಪೂವತ್ತಿಂಗಲ್ ಅವರ ಸಮ್ಮುಖದಲ್ಲಿ ನಡೆಯಲಿದೆ.

ದಿವ್ಯಬಲಿ ಪೂಜೆ ಹಾಗೂ ಹಬ್ಬದ ಸಂದೇಶವನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಮಾರ್ ಲೋರೆನ್ಸ್ ಮುಕ್ಕುಝೀ ಕೋರಲಿದ್ದಾರೆ.