ಸುಂಟಿಕೊಪ್ಪ, ಜ. 23: ಇಲ್ಲಿನ ಜೇಸಿಐ 2019-2020ರ ಸಾಲಿನ ಅಧ್ಯಕ್ಷರಾಗಿ ನಿಡ್ಯಮಲೆ ಅಶೋಕ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಆಯ್ಕೆಯಾಗಿದ್ದಾರೆ. ಪದಗ್ರಹಣ ಸಮಾರಂಭವು ತಾ. 26 ರಂದು ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ವಲಯ ಅಧ್ಯಕ್ಷ ಜೇಸಿ ಜಫಿನ್ಜಾಯ್, ವಲಯ ಉಪಾಧ್ಯಕ್ಷ ಜೇಸಿ ಪ್ರವೀಣ್ ಕುಮಾರ್ ಭಾಗವಹಿಸಲಿದ್ದಾರೆ. ಎಂದು ನಿರ್ಗಮಿತ ಅಧ್ಯಕ್ಷ ಅರುಣ್ಕುಮಾರ್ ತಿಳಿಸಿದ್ದಾರೆ.