ನಾಪೋಕ್ಲು, ಜ. 24: ಸ್ಥಳೀಯ ಪಟ್ಟಣದಲ್ಲಿ ಚರಂಡಿಗಳ ಅಸಮರ್ಪಕ ನಿರ್ವಹಣೆ ವಿರುದ್ಧ ಸಾರ್ವಜನಿಕರ ಆಕ್ರೋಶ ಕೇಳಿಬರುತ್ತಿದ್ದಂತೆಯೇ ಸ್ಥಳೀಯ ಗ್ರಾಮ ಪಂಚಾಯ್ತಿ ಎಚ್ಚೆತ್ತುಕೊಂಡಿದೆ.

ಜನಪ್ರತಿನಿಧಿಗಳು ಪಟ್ಟಣದಲ್ಲಿ ಚರಂಡಿ ವ್ಯವಸ್ಥೆಯನ್ನು ಪರಿಶೀಲಿಸಿದ್ದು, ಶುಚಿತ್ವ ಪಾಲಿಸಲು ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ. ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯದೆ ಕಲುಷಿತ ವಾತಾವರಣ ನಿರ್ಮಾಣವಾಗಿತ್ತು.

ಈ ಹಿನ್ನೆಲೆಯಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಚರಂಡಿಯಲ್ಲಿ ಸೇರಿದ್ದ ಕಸ, ಕಡ್ಡಿಗಳನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಕೆಲವು ಹೊಟೇಲ್ ಗಳಿಂದ ಕಲುಷಿತ ನೀರು ಹರಿದು ಚರಂಡಿ ಸೇರುತ್ತಿರುವದನ್ನು ಮನಗಂಡ ಪಂಚಾಯ್ತಿ ಪ್ರತಿನಿಧಿಗಳು, ಸಂಬಂಧಿಸಿ ದವರಿಗೆ ಸೂಕ್ತ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ‘ಶಕಿ’ಯೊಂದಿಗೆ ಮಾತನಾಡಿದ ಗಾಮ ಪಂಚಾಯ್ತ ಅಧ್ಯಕ್ಷ ಇಸ್ಮಾಯಿಲ್ ಕೆ.ಎ. ಮಾಧ್ಯಮ ಪ್ರತಿನಿಧಿಗಳು ಪಟ್ಟಣದ ಚರಂಡಿ ಅವ್ಯವಸ್ಥೆ ಬಗ್ಗೆ ಗಮನ ಸೆಳೆದ ಹಿನ್ನೆಲೆಯಲ್ಲಿ ಇದೀಗ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ವಿಎಸ್ಸೆಸ್ಸೆನ್ ಬ್ಯಾಂಕ್ ಕೆಳಗಡÉ ಹೊಟೇಲ್ ಒಂದರ ಕಲುಷಿತ ನೀರು ಚರಂಡಿಯಲ್ಲಿ ನಿಂತು ಸಮಸ್ಯೆ ಯಾಗಿತ್ತು. ಇದೀಗ ಚರಂಡಿಯನ್ನು ದುರಸ್ತಿಪಡಿಸಲಾಗಿದೆ.

ಹೊಟೇಲ್ ಮತ್ತಿತರ ಮಳಿಗೆಗಳ ಮಾಲೀಕರು ಮತ್ತು ಸಾರ್ವಜನಿಕರು ಕೂಡಾ ಶುಚಿತ್ವಕ್ಕೆ ಆದ್ಯತೆ ನೀಡಿ, ಪಂಚಾಯ್ತಿ ಯೊಂದಿಗೆ ಸಹಕಾರ ನೀಡಬೇಕೆಂದು ಕೋರಿದ ಅವರು, ಘನತ್ಯಾಜ್ಯವನ್ನು ಚರಂಡಿಗೆ ಹಾಕದಂತೆ ಮನವಿ ಮಾಡಿದರು.

ಚರಂಡಿಗಳ ಸೂಕ್ತ ನಿರ್ವಹಣೆ ಯಿಲ್ಲದೆ, ಪಟ್ಟಣದಲ್ಲಿ ದುರ್ವಾಸನೆಯ ವಾತಾವರಣ ಮನೆ ಮಾಡಿತ್ತು, ಕಸಕಡ್ಡಿ, ತ್ಯಾಜ್ಯಗಳಿಂದ ತುಂಬಿರುವ ಚರಂಡಿಗಳಿಂದ ದುರ್ವಾಸನೆ ಬೀರುತ್ತಿತ್ತು.

ಪರಿಣಾಮವಾಗಿ ಅಂಗಡಿ ಗಳಿಂದ ಗ್ರಾಹಕರೂ ದೂರ ವಾಗಿದ್ದರು. ಇದೀಗ ಮಾಧ್ಯಮದ ವರದಿಯನ್ನು ಆಧರಿಸಿ ಗ್ರಾ.ಪಂ.ಯು ಸಕಾಲಿಕವಾಗಿ ಚರಂಡಿಯನ್ನು ಸ್ವಚ್ಛ ಗೊಳಿಸುವ ಮೂಲಕ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿದೆ. ಈ ವೇಳೆ ಪಂಚಾಯ್ತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಹಾಗೂ ಸದಸ್ಯರಾದ ಕುಸು ಕುಶಾಲಪ್ಪ ಹಾಜರಿದ್ದರು.

-ದುಗ್ಗಳ