ಮಡಿಕೇರಿ, ಜ. 24: ಕಳೆದ ಆಗಸ್ಟ್ ಮಧ್ಯದಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ ಸಂದರ್ಭ ಹರಿದು ಬಂದಿರುವ ಆಹಾರ ಸಾಮಗ್ರಿ ಯೊಂದಿಗೆ, ಗೃಹೋಪಯೋಗಿ ವಸ್ತುಗಳು ಇನ್ನೂ ಕೂಡ ಇಲ್ಲಿನ ಸರಕಾರಿ ಶಾಲಾ ಕಟ್ಟಡದಲ್ಲಿ ರಾಶಿ ರಾಶಿ ದಾಸ್ತಾನು ಉಳಿದುಕೊಂಡಿದೆ. ಈಗಾಗಲೇ ಆಹಾರ ಧಾನ್ಯಗಳ ಸಹಿತ ಪಡಿತರ ವಸ್ತುಗಳನ್ನು ಬೇಕಾದ ಪ್ರಮಾಣದಲ್ಲಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ವಿದ್ಯಾರ್ಥಿ ನಿಲಯಗಳು, ಆಶ್ರಮ ಶಾಲೆಗಳು, ಗಿರಿಜನ ಅಭಿವೃದ್ಧಿ ಯೋಜನೆಯಡಿ ಹಾಡಿ ಗಳಿಗೂ ಸರಬರಾಜು ಮಾಡಲಾಗಿದೆ.

ಮಾತ್ರವಲ್ಲದೆ, ಜಿಲ್ಲೆಯಲ್ಲಿರುವ ಅನಾಥ ಆಶ್ರಮಗಳು, ವೃದ್ಧಾಶ್ರಮ ಗಳಿಗೂ ತಲಪಿಸಲು ಕ್ರಮ ಕೈಗೊಳ್ಳಲಾಗಿದೆ. ಆ ಹೊರತಾಗಿಯೂ ಇನ್ನು ಕೂಡ ರಾಶಿಗಟ್ಟಲೆ ಅಕ್ಕಿ, ಗೃಹೋಪಯೋಗಿ ವಸ್ತುಗಳು, ವಸ್ತ್ರ, ಕಂಬಳಿ, ಸೀರೆ, ಚಾಪೆ, ಜಮಕಾನೆ ಸಹಿತ ಪಾತ್ರೆಗಳು, ಪ್ಲಾಸ್ಟಿಕ್ ಸಾಮಗ್ರಿ, ಇನ್ನಿತರ ವಸ್ತುಗಳು ದಾಸ್ತಾನಿವೆ.

ಈ ಹಿಂದೆ ಜಿಲ್ಲಾಡಳಿತ ಸಂತ್ರಸ್ತ ರೆಂದು ಪರಿಗಣಿಸಿರುವ 840 ಕುಟುಂಬಗಳಿಗೆ ಇಂತಹ ವಸ್ತುಗ ಳೊಂದಿಗೆ ಆಹಾರ ಧಾನ್ಯಗಳನ್ನು ಮತ್ತೆ ಮತ್ತೆ ನೀಡಲಾಗಿದೆ. ಈ ಹೊರತಾಗಿ ಇನ್ನೂ ಕೂಡ ದಾಸ್ತಾನು ಉಳಿಯು ವಂತಾಗಿದೆ. ಇನ್ನೊಂದೆಡೆ ಉಚಿತ ವಾಗಿ ಇಂತಹ ಸಾಮಗ್ರಿಗಳನ್ನು ಸಮಾಜ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಐಟಿಡಿಪಿ ಸೇರಿದಂತೆ ಇತರ ಸರಕಾರಿ ವ್ಯವಸ್ಥೆ ಯಲ್ಲಿ ಪಡೆದುಕೊಂಡಿದ್ದರೂ, ಮಾಸಿಕವಾಗಿ ಹೊರಗಿನಿಂದ ಖರೀದಿಸುವಂತೆ ಬಿಲ್ ಗಳನ್ನು ಸೃಷ್ಟಿಸಿ ಹಣ ದುರುಪಯೋಗ ದಲ್ಲಿ ತೊಡಗಿರುವ ಆರೋಪವಿದೆ.

ಇಷ್ಟೊಂದು ಪ್ರಮಾಣದಲ್ಲಿ ದಾಸ್ತಾನು ಉಳಿದಿರುವ ಹೊರತಾ ಗಿಯೂ ಯಾರೊಬ್ಬರೂ ಜನಪ್ರತಿನಿಧಿಗಳ ಸಹಿತ ಗಮನ ಹರಿಸದಿರುವ ಪರಿಣಾಮ, ಸಾಕಷ್ಟು ದಾನಿಗಳ ನೆರವು ವ್ಯರ್ಥಗೊಂಡು ಅಪಾತ್ರರ ಪಾಲಾಗುವಂತಾಗಿದೆ ಎಂಬ ಆರೋಪವಿದೆ. ಇನ್ನು ಸರಕಾರಿ ದಾಖಲೆಯ 840 ಮಂದಿ ಹೊರತು ಇತರರಿಗೂ ಕಲ್ಪಿಸಲಾ ಗದೆ ಕಾನೂನಿನ ಮಾನದಂಡ ದಂತೆ, ಅಧಿಕಾರಿಗಳು ಉಳಿದಿರುವ ದಾಸ್ತಾನು ಏನು ಮಾಡಬೇಕೆಂಬ ಗೊಂದಲದಲ್ಲಿದ್ದಾರೆ.

ಈ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿ ಗಳು, ಆಡಳಿತ ವ್ಯವಸ್ಥೆ ತುರ್ತು ಗಮನಹರಿಸಿ ದಾಸ್ತಾನು ಸಾಮಗ್ರಿಯ ಸದುಪಯೋಗದೊಂದಿಗೆ, ದುರುಪಯೋಗ ತಡೆಗಟ್ಟುವಲ್ಲಿ ಕಾಳಜಿ ತೋರಬೇಕಿದೆ.